ಕಾಸರಗೋಡು:ಕೇರಳ ಅಕಾಡೆಮಿ ಫಾರ್ ಸ್ಕಿಲ್ಸ್ ಎಕ್ಸಲೆನ್ಸ್‌ನ ಮೇಲ್ನೋಟದಲ್ಲಿ ಸಂಕಲ್ಪ್ ಯೋಜನೆಯ ಭಾಗವಾಗಿ ಕಾಸರಗೋಡು ಜಿಲ್ಲಾಡಳಿತದ , ಜಿಲ್ಲಾ ಪ್ಲಾನಿಂಗ್ ಆಫಿಸ್ ನ , ಜಿಲ್ಲಾ ಸ್ಕಿಲ್ ಸಮಿತಿಯ ಆಶ್ರಯದಲ್ಲಿ ಉದ್ಯೋಗ ವೇದಿಕೆ ಮೆಗಾ ಉದ್ಯೋಗ ಮೇಳ 2022 ಮಾರ್ಚ್ 19 ರಂದು ಸರಕಾರಿ ಕಾಲೇಜು ಕಾಸರಗೋಡಿನಲ್ಲಿ ನಡೆಸಲು ನಿರ್ಧರಿಸಲಾಗಿದೆ.
43 ರಷ್ಟು ಕಂಪನಿಗಳಲ್ಲಿ ಸುಮಾರು 3200+ ಖಾಲಿ ಹುದ್ದೆಗಳನ್ನು ಈಗಾಗಲೇ ವರದಿ ಮಾಡಲಾಗಿದೆ . ಉದ್ಯೋಗಾಕಾಂಕ್ಷಿಗಳು ಮಾರ್ಚ್ 16 ರವರೆಗೆ ರಾಜ್ಯ ಉದ್ಯೋಗ ಪೋರ್ಟಲ್ (www.statejobportal.kerala. gov.in) ಎಂಬ ವೆಬ್ ಸೈಟ್ ಮೂಲಕ ನೋಂದಾಯಿಸಿಕೊಳ್ಳಬಹುದು.
ಉದ್ಯೋಗಾಕಾಂಕ್ಷಿಗಳು ರಾಜ್ಯ ಜಾಬ್ ಪೋರ್ಟಲ್‌ನಲ್ಲಿ ಉದ್ಯೋಗ ಮೇಳ ಒಪ್ ಶನ್ ಕ್ಲಿಕ್ ಮಾಡುವ ಮೂಲಕ ನೋಂದಾಯಿಸಿಕೊಳ್ಳಬಹುದು. ಇಂಜಿನಿಯರಿಂಗ್, ಫಾರ್ಮಸಿ, ನರ್ಸಿಂಗ್, ITI, ಆಟೋಮೊಬೈಲ್ ಪಾಲಿಟೆಕ್ನಿಕ್, MBA, ಪದವಿಪೂರ್ವ, ಸ್ನಾತಕೋತ್ತರ, ಪ್ಲಸ್ ಟು, ಹತ್ತನೇ ತರಗತಿ, ಅಲ್ಪಾವಧಿ ಉದ್ಯೋಗ ತರಬೇತಿ ಮುಗಿಸಿದವರಿಗೂ ಉದ್ಯೋಗ ಮೇಳದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ವರದಿಯಾಗಿದೆ. ಹೆಚ್ಚಿನ ಮಾಹಿತಿಗಾಗಿ 8848323517 ನ್ನು ಸಂಪರ್ಕಿಸ ಬಹುದು.