HEALTH TIPS

2024ರ ವೇಳೆಗೆ ವಿಮಾನ ಪ್ರಯಾಣಿಕರ ಸಂಖ್ಯೆ 40 ಕೋಟಿಗೆ ಹೆಚ್ಚಳ: ಸಿಂಧಿಯಾ

          ನವದೆಹಲಿದೇಶದ ವಿಮಾನಯಾನ ಕ್ಷೇತ್ರ ವೇಗವಾಗಿ ಬೆಳೆಯುತ್ತಿದ್ದು, 2023-24ರ ವೇಳೆಗೆ ವಿಮಾನಗಳಲ್ಲಿ ಪ್ರಯಾಣಿಸುವವರ ಸಂಖ್ಯೆ 40 ಕೋಟಿಗೆ ಹೆಚ್ಚುವ ವಿಶ್ವಾಸ ಇದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಬುಧವಾರ ಹೇಳಿದ್ದಾರೆ.

            ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಈ ವಿಷಯ ತಿಳಿಸಿದ ಅವರು, 'ಕಳೆದ ಏಳು ದಿನಗಳ ಅವಧಿಯಲ್ಲಿ ಪ್ರತಿದಿನ 3.82 ಲಕ್ಷ ಜನರು ವಿಮಾನಗಳ ಮೂಲಕ ಪ್ರಯಾಣಿಸಿದ್ದು, ಈ ಸಂಖ್ಯೆ ಬರುವ ದಿನಗಳಲ್ಲಿ ಹೆಚ್ಚಲಿದೆ' ಎಂದರು.

            '2018-19ನೇ ಸಾಲಿನಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ 14.50 ಕೋಟಿ ಇತ್ತು. ಕೋವಿಡ್‌ ಪಿಡುಗಿನ ಕಾರಣದಿಂದಾಗಿ 2021ರಲ್ಲಿ ವಿಮಾನಗಳಲ್ಲಿ ಪ್ರಯಾಣಿಸುವವರ ಸಂಖ್ಯೆ 8.38 ಕೋಟಿಗೆ ಕುಸಿಯಿತು' ಎಂದು ಅವರು ಸದನಕ್ಕೆ ವಿವರಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries