ಡೆಹ್ರಾಡೂನ್: ಪಂಚರಾಜ್ಯಗಳ ಚುನಾವಣೆಯ ಪೈಕಿ ಉತ್ತರಾಖಂಡ್ ನಲ್ಲಿ ಸ್ಪಷ್ಟ ಬಹುಮತ ಪಡೆದಿದ್ದ ಬಿಜೆಪಿ ಮಾ.21 ರಂದು ನೂತನ ಸಿಎಂ ಆಯ್ಕೆ ಮಾಡಲಿದೆ.
ಪಕ್ಷದ ವೀಕ್ಷಕರಾಗಿ ರಾಜ್ಯಕ್ಕೆ ರಾಜನಾಥ್ ಸಿಂಗ್ ಹಾಗೂ ಮೀನಾಕ್ಷಿ ಲೇಖಿ ಆಗಮಿಸಿದ್ದು, ಸಭೆ ನಡೆಸಿದ್ದಾರೆ ಎಂದು ಬಿಜೆಪಿ ವಕ್ತಾರ ಶದಾಬ್ ಶಮ್ಸ್ ಹೇಳಿದ್ದಾರೆ.
ಸೋಮವಾರ ಸಿಎಂ ಆಯ್ಕೆ ಖಚಿತವಾಗಲಿದ್ದು, ಮಂಗಳವಾರ ನೂತನ ಮುಖ್ಯಮಂತ್ರಿಗಳ ಪದಗ್ರಹಣ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಜೆಪಿ ನಡ್ಡಾ, ಬಿಜೆಪಿ ಆಡಳಿತವಿರುವ ಸಿಎಂಗಳು, ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಖತೀಮಾದಲ್ಲಿ ಸೋಲು ಕಂಡಿದ್ದರೂ ಈ ಹಿಂದಿನ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರೇ ಸಿಎಂ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಧಾಮಿ ಹೆಸರನ್ನು ಹೊರತುಪಡಿಸಿದರೆ. ಸತ್ಪಲ್ ಮಹಾರಾಜ್, ಧನ್ ಸಿಂಗ್ ರಾವತ್, ರಾಜ್ಯಸಭೆ ಸದಸ್ಯ ಅನಿಲ್ ಬಲುನಿ ಅವರ ಹೆಸರೂ ಸಿಎಂ ಸ್ಥಾನಕ್ಕೆ ಕೇಳಿಬರುತ್ತಿದೆ.