ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಭಾರೀ ರಾಜಕೀಯ ಕೋಲಾಹಲ ಸೃಷ್ಟಿಸಿರುವ ಬೀರ್ಭುಮ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸರು ಆರೋಪಿಗಳೆಂದು ಗುರುತಿಸಿದ 21 ಮಂದಿಯನ್ನೇ ಸಿಬಿಐ ಕೂಡಾ ಆರೋಪಿಗಳೆಂದು ಗುರುತಿಸಿದೆ.
ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಭಾರೀ ರಾಜಕೀಯ ಕೋಲಾಹಲ ಸೃಷ್ಟಿಸಿರುವ ಬೀರ್ಭುಮ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸರು ಆರೋಪಿಗಳೆಂದು ಗುರುತಿಸಿದ 21 ಮಂದಿಯನ್ನೇ ಸಿಬಿಐ ಕೂಡಾ ಆರೋಪಿಗಳೆಂದು ಗುರುತಿಸಿದೆ.
ತೃಣಮೂಲ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅನಾರುಲ್ ಹೊಸ್ಸೈನಿಯನ್ನು ಸಿಬಿಐ ವಿಚಾರಣೆ ನಡೆಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಎಂಟು ಮಂದಿಯ ಸಜೀವ ದಹನದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಸರಿ ಸುಮಾರು 20 ರಷ್ಟು ಮಂದಿಯನ್ನು ಬಂಧಿಸಲಾಗಿದೆ. ಸ್ಥಳೀಯ ಟಿಎಂಸಿ ನಾಯಕ ಭಡು ಶೇಖ್ ಅವರ ಹತ್ಯೆಗೆ ಪ್ರತೀಕಾರವಾಗಿ ಈ ಹತ್ಯಾಕಾಂಡ ನಡೆದಿದೆ ಎನ್ನಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿರುವ ಸಿಎಂ ಬ್ಯಾನರ್ಜಿ, ಪೊಲೀಸರಿಗೆ ಮಾಹಿತಿ ನೀಡದ ಮತ್ತು ಅಪರಾಧವನ್ನು ತಡೆಯಲು ಸಹಾಯ ಮಾಡದ ಅನಾರುಲ್ ಹೊಸೈನ್ ಅವರನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದಾಗ್ಯೂ, ಸಿಬಿಐ ವಿಚಾರಣೆಗೆ ಕರೆದೊಯ್ಯುತ್ತಿದ್ದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅನಾರುಲ್ ಹೊಸೈನ್, ಇದು ನನ್ನ ವಿರೋಧಿಗಳ ಪಿತೂರಿ ಎಂದು ಹೇಳಿದ್ದಾರೆ.