ತಿರುವನಂತಪುರ: ರಾಜ್ಯದಲ್ಲಿ ವಾರ್ಷಿಕ ಪರೀಕ್ಷೆಯ ದಿನಾಂಕ ಪ್ರಕಟಿಸಲಾಗಿದೆ. ಐದನೇ ತರಗತಿಯಿಂದ ಒಂಬತ್ತನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಇದೇ 23 ರಿಂದ ಪರೀಕ್ಷೆಗಳು ಆರಂಭವಾಗಲಿವೆ. ಪರೀಕ್ಷೆಯು ಏಪ್ರಿಲ್ 2 ರಂದು ಕೊನೆಗೊಳ್ಳಲಿದೆ.
ವಿಶೇಷ ಸನ್ನಿವೇಶವಾದ್ದರಿಂದ ಪರೀಕ್ಷೆಯ ಪ್ರಶ್ನೆಗಳು ಸರಳವಾಗಿರುತ್ತವೆ ಎಂದು ಶಿಕ್ಷಣ ಸಚಿವ ವಿ.ಎಸ್. ಶಿವಂ ಕುಟ್ಟಿ ಮಾಹಿತಿ ನೀಡಿದರು. ಮಾರ್ಚ್ 31 ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದೆ. ಇದು ಏಪ್ರಿಲ್ 29 ರಂದು ಕೊನೆಗೊಳ್ಳಲಿದೆ. ಪ್ಲಸ್ ಟು ಪರೀಕ್ಷೆಯು ಮಾರ್ಚ್ 30 ರಂದು ಪ್ರಾರಂಭವಾಗಿ ಏಪ್ರಿಲ್ 22 ರಂದು ಕೊನೆಗೊಳ್ಳಲಿದೆ ಎಂದು ಅವರು ಹೇಳಿದರು. ಪ್ಲಸ್ ಒನ್-ವಿಎಚ್‍ಎಸ್‍ಇ ಪರೀಕ್ಷೆಯು ಜೂನ್ 2 ರಿಂದ 18 ರವರೆಗೆ ನಡೆಯಲಿದೆ.
ಏಪ್ರಿಲ್ ಮತ್ತು ಮೇ ಕಡು ಬೇಸಿಗೆಯ ತಿಂಗಳುಗಳು. ಜೂನ್ 1 ರಂದು ಹೊಸ ಅಧ್ಯಯನ ವರ್ಷ ಆರಂಭಗೊಳ್ಳಲಿದೆ. ಶಾಲೆ ತೆರೆಯುವ ಮುನ್ನವೇ ಮೇ 15ರಂದು ಸ್ವಚ್ಛತಾ ಕಾರ್ಯ ಆರಂಭವಾಗಲಿದೆ. ಮೇ ತಿಂಗಳಿನಲ್ಲಿ ಶಿಕ್ಷಕರಿಗೆ ತರಬೇತಿ ತರಗತಿಗಳೂ ನಡೆಯಲಿವೆ. ಮುಂದಿನ ಶೈಕ್ಷಣಿಕ ವರ್ಷದ ಕ್ಯಾಲೆಂಡರ್ ಕೂಡ ಮೇ ತಿಂಗಳಲ್ಲಿ ಪ್ರಕಟವಾಗಲಿದೆ.