HEALTH TIPS

ಮತ್ತೆ ಸಿಎಂ ಆಗುವ ಅಖಿಲೇಶ್ ಯಾದವ್ ಕನಸಿಗೆ ಅಡ್ಡಿಯಾದ 'ಯೋಗಿ', ಯುಪಿಯಲ್ಲಿ 250ರ ಗಡಿಯತ್ತ ಬಿಜೆಪಿ

     ಲಖನೌ: ದೇಶದ ಅತೀ ದೊಡ್ಡ ರಾಜ್ಯ ಎಂದೇ ಖ್ಯಾತಿಗಳಿಸಿರುವ ಉತ್ತರಪ್ರದೇಶದಲ್ಲಿ ಮತ್ತೆ ಸಿಎಂ ಆಗುವ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರ ಕನಸಿಗೆ ಮತ್ತೆ ಯೋಗಿ ಆದಿತ್ಯಾನಾಥ್ ನೇತೃತ್ವದ ಬಿಜೆಪಿ ಅಡ್ಡಿಯಾಗಿದ್ದು, ಬರೊಬ್ಬರಿ 250 ಸ್ಥಾನಗಳತ್ತ ಬಿಜೆಪಿ ದಾಂಗುಡಿ ಇಟ್ಟಿದೆ.

       ಗುರುವಾರ ಆರಂಭವಾದ ಉತ್ತರ ಪ್ರದೇಶ ಚುನಾವಣೆಯ ಮತಎಣಿಕೆ ಕಾರ್ಯ ಮೂರನೇ ಗಂಟೆಗೆ ಪ್ರವೇಶ ಮಾಡಿದ್ದು, ಬಿಜೆಪಿ ಅಜೇಯ ಮುನ್ನಡೆ ಮುಂದುವರೆದಿದೆ. ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಅಂದರೆ 252 ಸ್ಥಾನಗಳಲ್ಲಿ ಯೋಗಿ ಆದಿತ್ಯಾನಾಥ್ ನೇತೃತ್ವದ ಬಿಜೆಪಿ ಮುನ್ನಡೆ ಸಾಧಿಸುವ ಮೂಲಕ ಮತ್ತೆ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿ ನಿಂತಿದೆ. ಇನ್ನು 2ನೇ ಅತೀ ದೊಡ್ಡ ಪಕ್ಷವಾಗಿ ಸಮಾಜವಾದಿ ಪಕ್ಷವು ಇದ್ದು ಈ ವರೆಗಿನ ಫಲಿತಾಂಶದಲ್ಲಿ ಎಸ್ ಪಿ ಪಕ್ಷ 112 ಸ್ಥಾನಗಳಲ್ಲಷ್ಟೇ ಮುನ್ನಡೇ ಕಾಯ್ದುಕೊಂಡಿದೆ.

       ಉಳಿದಂತೆ ಮಾಯಾವತಿ ಅವರ ಬಿಎಸ್ ಪಿ 8, ಕಾಂಗ್ರೆಸ್ 8 ಮತ್ತು ಇತರರು 4 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಕೇಂದ್ರದಲ್ಲಿ ನಿರ್ಣಾಯಕ ಪಾತ್ರವಹಿಸುವ ಉತ್ತರ ಪ್ರದೇಶ
      ಇನ್ನು ದೇಶದ ಅತೀ ದೊಡ್ಡ ಮತ್ತು ಅತೀ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯ ಎಂಬ ಕೀರ್ತಿಯೂ ಉತ್ತರ ಪ್ರದೇಶಕ್ಕಿದ್ದು, ಒಟ್ಟು 80 ಸಂಸದೀಯ ಸ್ಥಾನಗಳನ್ನು ಹೊಂದಿದೆ. ಹೀಗಾಗಿ ಉತ್ತರ ಪ್ರದೇಶವು ಕೇಂದ್ರದಲ್ಲಿ ಅಧಿಕಾರದ ಕೀಲಿಯನ್ನು ಹೊಂದಿದೆ ಎನ್ನಲಾಗುತ್ತದೆ.

    ಸತತ 2ನೇ ಅವಧಿಗೆ ಅಧಿಕಾರ  ಹಿಡಿಯುವ ಮೊದಲ ಪಕ್ಷ ಬಿಜೆಪಿ
       ಇನ್ನು ಒಟ್ಟು 403 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿಗೆ ಬಹುಮತದತ್ತ ಸಾಗಿದ್ದು, ಆ ಮೂಲಕ ಮೂರು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ ಸತತ ಎರಡನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವ ಮೊದಲ ಪಕ್ಷ ಎಂಬ ಕೀರ್ತಿಗೆ ಬಿಜೆಪಿ ಭಾಜನವಾಗಲಿದೆ.

       ಬಿಜೆಪಿಗೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ಉತ್ತರಪ್ರದೇಶದಲ್ಲಿ ಬಿಜೆಪಿಗೆ ಅತ್ಯಂತ ದೊಡ್ಡ ಸವಾಲಾಗಿದೆ ಎಂದು ಪರಿಗಣಿಸಲಾಗಿತ್ತು. ಇದು ಇತರೆ ಸಣ್ಣ ಪಕ್ಷಗಳೊಂದಿಗೆ ವೈವಿಧ್ಯಮಯ ಒಕ್ಕೂಟವನ್ನು ರಚಿಸಿತ್ತು, ಇದು ಇತರ ಹಿಂದುಳಿದ ವರ್ಗಗಳ ಮತದಾರರೊಂದಿಗೆ ತನ್ನ ಮುಸ್ಲಿಂ-ಯಾದವ್ ಬೆಂಬಲದ ನೆಲೆಯನ್ನು ಪೂರೈಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ರಾಜ್ಯದ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ನಿರ್ಣಾಯಕ ಈ ಮುಸ್ಲಿಮ್ ಮತದಾರರು ನಿರ್ಣಾಯಕರಾಗಿದ್ದರು. ಆದರೆ ಹಾಲಿ ಪರಿಸ್ಥಿತಿ ಗಮನಿಸಿದರೆ ಅಲ್ಪಸಂಖ್ಯಾತ ಮತಗಳನ್ನು ಓಲೈಸಿಕೊಳ್ಳುವುದರಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎನ್ನಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries