ಬದಿಯಡ್ಕ: ಮವ್ವಾರು ಶ್ರೀ ವಿಶ್ವಕರ್ಮ ಕಾಳಿಕಾಂಬಾ ಭಜನಾ ಮಂದಿರದ 21ನೇ ವಾರ್ಷಿಕೋತ್ಸವವು ಬ್ರಹ್ಮಶ್ರೀ ಪುರೋಹಿತ ರತ್ನ ಬಿ.ಕೇಶವ ಆಚಾರ್ಯ ಉಳಿಯತ್ತಡ್ಕ ಅವರ ನೇತೃತ್ವದಲ್ಲಿ ಮಾರ್ಚ್ 26 ಶನಿವಾರದಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಇದರ ಅಂಗವಾಗಿ ಅಂದು ಬೆಳಿಗ್ಗೆ 6.36ಕ್ಕೆ ದೀಪ ಪ್ರತಿಷ್ಠೆ, 8 ಗಂಟೆಗೆ ಗಣಪತಿ ಹವನ, ಬೆಳಿಗ್ಗೆ 11.30ರಿಂದ ಅರವಿಂದ ಆಚಾರ್ಯ ಮಾಣಿಲ ಅವರಿಂದ ದಾಸ ಸಂಕೀರ್ತನೆ, ಮಧ್ಯಾಹ್ನ 12.30ಕ್ಕೆ ಶ್ರೀವಿಶ್ವಕರ್ಮ ಮಹಾಪೂಜೆ, ಪ್ರಸಾದ ವಿತರಣೆ,ಸಂಜೆ 6.30ಕ್ಕೆ ದೀಪ ಪ್ರಜ್ವಲನೆ,ರಾತ್ರಿ 7ಗಂಟೆಯಿಂದ ವಿವಿಧ ಭಜನಾ ಸಂಘಗಳಿಂದ ಭಜನೆ, ರಾತ್ರಿ 9.30ಕ್ಕೆ ಮಹಾಮಂಗಳಾರತಿಯೊಂದಿಗೆ ಸಂಪನ್ನಗೊಳ್ಳಲಿದೆ.