ಉಪ್ಪಳ: "ಯಕ್ಷಮೌಕ್ತಿಕ ಮಹಿಳಾಕೂಟ ಮಂಗಲ್ಪಾಡಿ" ಕಲಾತಂಡವು ತಂಡದ ಗುರುಗಳಾದ ಹರೀಶ್ ಬಳಂತಿಮೊಗರು ಇವರ ಸ್ವರ್ಣ ಸಂಭ್ರಮಾಚರಣೆ , ಹಿರಿಯ ಸಾಧಕರಿಗೆ ಸಂಮಾನ, ಮತ್ತು ತಾಳಮದ್ಧಳೆ ಸಪ್ತಾಹ ಮಾರ್ಚ್ 27ರಿಂದ ಎಪ್ರಿಲ್ 2ರ ವರೆಗೆ ಮಂಗಲ್ಪಾಡಿ ಏಕಾಹ ಭಜನಾ ಮಂದಿರದ ಬಳಿ ಇರುವ ಸಾಕ್ಷಾತ್ಕಾರ ಮನೆಯ ಆವರಣದಲ್ಲಿ ಪ್ರತಿ ದಿನ ಸಂಜೆ 4.30ರಿಂದ ಜರಗಲಿದೆ.
ಮಾರ್ಚ್ 27ರಂದು ಅಪರಾಹ್ನ 3.30ರಿಂದ ತಾಳಮದ್ದಳೆ ಸಪ್ತಾಹದ ಉದ್ಘಾಟನಾ ಸಮಾರಂಭ ಜರಗಲಿದ್ದು, ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಶ್ರೀಗಳು ಉದ್ಘಾಟಿಸುವರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಜಿ ಎಲ್ ಹೆಗಡೆ ಅಧ್ಯಕ್ಷತೆ ವಹಿಸುವರು. ನಾಡಿನ ಹಿರಿಯ ವೈದ್ಯ ಡಾ.ಪ್ರಭಾಕರ ಹೊಳ್ಳ ಕಯ್ಯಾರು ಅವರಿಗೆ ಗೌರವಾರ್ಪಣೆ ನಡೆಯಲಿದೆ. ಬಳಿಕ ಯಕ್ಷ ಶ್ರೀಹರಿ ತಂಡ ಮಂಗಳೂರು ಅವರಿಂದ ಗುರು ಕಾರುಣ್ಯ ತಾಳಮದ್ದಳೆ ಜರಗಲಿದೆ.
ಮಾರ್ಚ್ 28ರಂದು ಸಾಹಿತಿ ವಿ ಬಿ ಕುಳಮರ್ವ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರಗಲಿದ್ದು ಹಿರಿಯ ಅರ್ಥಧಾರಿ ಬೆಳ್ಳಿಗೆ ನಾರಾಯಣ ಮಣಿಯಾಣಿ ಅವರಿಗೆ ಸಂಮಾನ ಜರಗಲಿದೆ.ಬಳಿಕ ಮಹಿಳಾ ಯಕ್ಷಕೂಟ ಪೆÇನ್ನೆತ್ತೋಡಿ ತಂಡದಿಂದ ಕರ್ಣಾವಸಾನ ಜರಗಲಿದೆ.
ಮಾರ್ಚ್ 29ರಂದು ಮಂಗಲ್ಪಾಡಿ ಸಹಕಾರಿ ಬ್ಯಾಂಕ್ ನ ನಿರ್ದೇಶಕಿ ಜಯಂತಿ ಟಿ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಭಾ ಸಮಾರಂಭ ಜರಗಲಿದ್ದು ಹಿರಿಯ ವೇಷಧಾರಿ ವಾಸುದೇವ ರಾವ್ ಸುರತ್ಕಲ್ ಅವರು ಸಂಮಾನ ಗೊಳ್ಳಲಿದ್ದಾರೆ. ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ತಡಂಬೈಲ್ ಸುರತ್ಕಲ್ ತಂಡದಿಂದ ರುಕ್ಮಿಣಿ ಸ್ವಯಂವರ ತಾಳಮದ್ದಳೆ ಜರಗಲಿದೆ.
ಮಾರ್ಚ್ 30ರಂದು ಪಂಚಾಯತ್ ಸದಸ್ಯ ವಿಜಯಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ಸಭೆ ಜರಗಲಿದ್ದು ಹಿರಿಯ ಅರ್ಥಧಾರಿ ಭಾಸ್ಕರ ರಾವ್ ಅಳಿಕೆ ಅವರಿಗೆ ಸಂಮಾನ ನಡೆಯಲಿದೆ. ಹಾಗೂ ಯಕ್ಷಭಾರತಿ ರಿ ನೀರ್ಚಾಲು ತಂಡದಿಂದ ಸುದರ್ಶನ ವಿಜಯ ತಾಳಮದ್ದಳೆ ಜರಗಲಿದೆ.
ಮಾರ್ಚ್ 31ರಂದು ಸಾಮಾಜಿಕ ಮುಖಂಡ ಲಿಂಗಪ್ಪ ಪಟೇಲ ಅವರ ಅಧ್ಯಕ್ಷತೆಯಲ್ಲಿ ಸಭೆ ಜರಗಲಿದ್ದು ಹವ್ಯಾಸಿ ಯಕ್ಷಗಾನ ಕಲಾವಿದ ,ಶಿಕ್ಷಕ ವಿಶ್ವನಾಥ ಆಳ್ವ ಮೀನಾರು ಅವರಿಗೆ ಸಂಮಾನ ನಡೆಯಲಿದೆ. ಬಳಿಕ ಯಕ್ಷಕಲಾ ಮಹಿಳಾತಂಡ ಸುರತ್ಕಲ್ ತಂಡದಿಂದ ದಕ್ಷಯಜ್ಞ ತಾಳಮದ್ದಳೆ ಜರಗಲಿದೆ.
ಏಪ್ರಿಲ್ 1 ರಂದು ಯೋಗೀಶರಾವ್ ಚಿಗುರುಪಾದೆ ಸದಸ್ಯರು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಅವರ ಅಧ್ಯಕ್ಷತೆಯಲ್ಲಿ ಸಭೆ ಜರಗಲಿದ್ದು ಹವ್ಯಾಸಿ ಯಕ್ಷಗಾನ ಕಲಾವಿದ ,ಶಿಕ್ಷಕ ಯಕ್ಷಗಾನ ಗುರುಗಳು ಆದ ಶೇಖರ ಶೆಟ್ಟಿ ಬಾಯಾರು ಅವರಿಗೆ ಸಂಮಾನ ನಡೆಯಲಿದೆ. ಬಳಿಕ ಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದಿಂದ ಶ್ರೀಕೃಷ್ಣ ಪರಂಧಾಮ ತಾಳಮದ್ದಳೆ ಜರಗಲಿದೆ.
ಏಪ್ರಿಲ್ 2 ರಂದು 3.30ರಿಂದ ಸಪ್ತಾಹದ ಸಮಾರೋಪ ಸಮಾರಂಭ ಜರಗಲಿದ್ದು ಖ್ಯಾತ ವೈದ್ಯ ಡಾ.ಬಿ ಎಸ್ ರಾವ್ ಕಾಸರಗೋಡು ಅವರ ಅಧ್ಯಕ್ಷತೆಯಲ್ಲಿ ಸಭೆ ಜರಗಲಿದ್ದು ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಎಡನೀರು ಸಂಸ್ಥಾನ ಆಶೀರ್ವಚನ ನೀಡುವರು. ಅಭ್ಯಾಗತರಾಗಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರು ಭಾಗವಹಿಸುವರು. ಯಕ್ಷಮೌಕ್ತಿಕ ಮಹಿಳಾಕೂಟ ಮಂಗಲ್ಪಾಡಿ ತಂಡದ ಗುರುಗಳಾದ ಹರೀಶ ಬಳಂತಿ ಮುಗರು ಅವರಿಗೆ ಗುರುವಂದನೆ ಜರಗಲಿದೆ. ಬಳಿಕ ಯಕ್ಷಮೌಕ್ತಿಕ ಮಹಿಳಾಕೂಟ ಮಂಗಲ್ಪಾಡಿ ತಂಡದಿಂದ ಶಾಪಾನುಗ್ರಹ ತಾಳಮದ್ದಳೆ ಜರಗಲಿದೆ.