ಕಾಸರಗೋಡು: ಕೇರಳ ಲೋಕಸೇವಾ ಆಯೋಗದವರು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಅಸಿಸ್ಟೆಂಟ್, ಬೀಟ್‍ಫಾರೆಸ್ಟ್ ಆಫೀಸರ್, ಲ್ಯಾಬ್ ಟೆಕ್ನಿಷಿಯನ್ ಮುಂತಾದ ಆನೇಕ ಹುದ್ದೆಗಳಿಗೆ ನಿಗತ ಅರ್ಹತೆಯಿರುವರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಬಗ್ಗೆ ವಿಶೇಷ ಉದ್ಯೋಗ ಮಾಹಿತಿ ಶಿಬಿರವು ಮಾ.27ರಂದು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಬ್ಯಾಂಕ್ ರಸ್ತೆಯಲ್ಲಿರುವ ಕಸಾಪದ ಕಚೇರಿಯಲ್ಲಿ ನಡೆಯಲಿರುವುದು. ಕಾಸರಗೋಡಿನ ಆಸಕ್ತ ಉದ್ಯೋಗಾರ್ಥಿಗಳು ತಮ್ಮ ಹೆಸರನ್ನು ಉದ್ಯೋಗ ಮಾಹಿತಿ ಕೇಂದ್ರದ ನಿರ್ದೇಶಕ ನಿವೃತ್ತ ಲೋಕಸೇವಾ ಆಯೋಗದ ಅಂಡರ್‍ಸೆಕ್ರೆಟರಿ ಗಣೇಶ್ ಪ್ರಸಾದ್ ಪಾಣೂರು ( 9496237601)ಅವರನ್ನು ಸಂಪರ್ಕಿಸಬಹುದು.