ತಿರುವನಂತಪುರ: ರಾಜ್ಯದಲ್ಲಿ ಇಂದು 2,846 ಮಂದಿಗೆ ಕೋವಿಡ್ ದೃಢಪಟ್ಟಿದೆ. ತಿರುವನಂತಪುರ 486, ಎರ್ನಾಕುಳಂ 436, ಕೊಟ್ಟಾಯಂ 314, ಕೊಲ್ಲಂ 249, ತ್ರಿಶೂರ್ 232, ಕೋಝಿಕ್ಕೋಡ್ 198, ಪತ್ತನಂತಿಟ್ಟ 189, ಇಡುಕ್ಕಿ 157, ಮಲಪ್ಪುರಂ 115, ಪಾಲಕ್ಕಾಡ್ 114, ಕಣ್ಣುರು 113, ವಯನಾಡ್ 112, ಆಲಪ್ಪುಳ 111, ಕಾಸರಗೋಡು 20 ಎಂಬಂತೆ ಸೋಂಕು ದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ 40,523 ಮಾದರಿಗಳನ್ನು ಪರೀಕ್ಷಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 93,948 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಇವರಲ್ಲಿ 92,065 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದಾರೆ ಮತ್ತು 1883 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ. ಒಟ್ಟು 243 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಸ್ತುತ, 24,912 ಕೊರೋನಾ ಪ್ರಕರಣಗಳಲ್ಲಿ, ಕೇವಲ 7.8 ಪ್ರತಿಶತದಷ್ಟು ಜನರು ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಎರಡು ಮಂದಿ ಕೊರೊನಾ ಬಾಧಿಸಿ ಮೃತರಾಗಿದ್ದಾರೆ. ಇದಲ್ಲದೆ, ಹಿಂದಿನ ದಿನಗಳಲ್ಲಿ ದಾಖಲೆಗಳ ವಿಳಂಬದಿಂದ 38 ಸಾವುಗಳು ಮತ್ತು ಸುಪ್ರೀಂ ಕೋರ್ಟ್ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ್ದರಿಂದ 128 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 65,501ಕ್ಕೆ ಏರಿಕೆಯಾಗಿದೆ.
ಇಂದು ಸೋಂಕು ಪತ್ತೆಯಾದವರಲ್ಲಿ 8 ಮಂದಿ ಹೊರ ರಾಜ್ಯದವರು. 2696 ಮಂದಿ ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. 115 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು ಇಪ್ಪತ್ತೇಳು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಪತ್ತೆಯಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 4325 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 676, ಕೊಲ್ಲಂ 451, ಪತ್ತನಂತಿಟ್ಟ 245, ಆಲಪ್ಪುಳ 224, ಕೊಟ್ಟಾಯಂ 260, ಇಡುಕ್ಕಿ 302, ಎರ್ನಾಕುಳಂ 813, ತ್ರಿಶೂರ್ 252, ಪಾಲಕ್ಕಾಡ್ 146, ಮಲಪ್ಪುರಂ 251, ಕೋಝಿಕ್ಕೋಡ್ 445, ವಯನಾಡ್ 96, ಕಣ್ಣೂರು 86, ಕಾಸರಗೋಡು 78 ಎಂಬಂತೆ ಗುಣಮುಖರಾಗಿದ್ದಾರೆ.