ತಿರುವನಂತಪುರ: ಕೇರಳ ಸಾಲದ ಸುಳಿಯಲ್ಲಿ ಸಿಲುಕಿದೆ. ರಾಜ್ಯದ ಸಾಲವು `2,96,900.85 ಕೋಟಿಗಳಷ್ಟಿದೆ. 2020-21ರ ಆರ್ಥಿಕ ಪರಿಶೀಲನಾ ವರದಿಯಲ್ಲಿ ಇದನ್ನು ಹೇಳಲಾಗಿದೆ.
ಇದು 2019-20ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ ಹೆಚ್ಚಳವಾಗಿದೆ. ಕಳೆದ ವರ್ಷಕ್ಕಿಂತ ಸಾಲ ಶೇ.3.59ರಷ್ಟು ಹೆಚ್ಚಿದೆ ಎಂದು ವರದಿ ತಿಳಿಸಿದೆ. ಇದರೊಂದಿಗೆ ಕೇರಳದ ಪ್ರತಿಯೊಬ್ಬರ ಸಾಲ 88,876.3415 ರೂ. ಆಗಿ ಏರಿಕೆಯಾಗಿದೆ. ಆಂತರಿಕ ಸಾಲ ಶೇ.14.77ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
2019-20 ರಲ್ಲಿ ಸಾಲ-ಜಿಡಿಪಿ ಅನುಪಾತವು 31.58 ಶೇಕಡಾ.ಇತ್ತು. ಇದು ಈ ವರ್ಷ 37.13 ರಷ್ಟು ಹೆಚ್ಚಾಗಿದೆ. ಕೇಂದ್ರ ಸರಕಾರದಿಂದ ಹೆಚ್ಚುವರಿಯಾಗಿ ಮಂಜೂರಾದ ಸಾಲದ ಬಳಕೆಯೇ ಇದಕ್ಕೆ ಕಾರಣ ಎಂದು ಅಂದಾಜಿಸಲಾಗಿದೆ.
ರಾಜ್ಯದ ಒಟ್ಟು ಸಾಲದ ಶೇಕಡಾ 62.93 ರಷ್ಟನ್ನು ದೇಶೀಯ ಸಾಲ ಹೊಂದಿದೆ. 2019-20ರಲ್ಲಿ ಆಂತರಿಕ ಸಾಲ 1,65,960.03 ಕೋಟಿ ರೂ. ಇದು 2020-21ರಲ್ಲಿ 1,90,474.09ಕ್ಕೆ ಏರಿಕೆಯಾಗಿದೆ. ಆಂತರಿಕ ಸಾಲ ಶೇ.14.77ರಷ್ಟು ಹೆಚ್ಚಾಗಿದೆ. 2020-21ನೇ ಸಾಲಿನ ಒಟ್ಟು ಸಾಲವು 42,355.47 ಕೋಟಿ ರೂ.ಗಳಾಗಿದ್ದು, 21,551.68 ಕೋಟಿ ರೂ.ಏರಿಕೆಯಾಗಿದೆ.