ಮುಳ್ಳೇರಿಯ: ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ದೇವಾಲಯದ ಜಾತ್ರೋತ್ಸವ ಮಾರ್ಚ್ 29 ಮತ್ತು 30 ರಂದು ನಾನಾ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಮಾರ್ಚ್ 28ರಂದು ರಾತ್ರಿ ಅತ್ತಾಳ, ಮಾರ್ಚ್ 29ರಂದು ಬೆಳಿಗ್ಗೆ 8.30ಕ್ಕೆ ಗಣಪತಿಹೋಮ, 9ರಿಂದ ಕುಂಟಾರು ಶ್ರೀ ಅಯ್ಯಪ್ಪ ಭಜನಾ ಸಂಘ, ಉಯಿತ್ತಡ್ಕ ಶ್ರೀ ಮೂಕಾಂಬಿಕಾ ಭಜನಾ ಸಂಘ, ಶ್ರೀ ಹರಿಪ್ರಿಯಾ ಭಜನಾ ಸಂಘ ಮುಳ್ಳೇರಿಯ ಇವರಿಂದ ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 4 ಗಂಟೆಗೆ ಕುಂಟಾರು ಶ್ರೀ ಶಾರದಾ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಭಜನೆ, ರಾತ್ರಿ 7.30ಕ್ಕೆ ಮಹಾಪೂಜೆ, ಅನ್ನದಾನ, ರಾತ್ರಿ 8.30ಕ್ಕೆ ಶ್ರೀದೇವರ ಭೂತಬಲಿ ಉತ್ಸವ, ಕಟ್ಟೆಪೂಜೆ, ಸಿಡಿಮದ್ದು ಪ್ರದರ್ಶನ ನಡೆಯಲಿದೆ.
ಮಾರ್ಚ್ 30ರಂದು ಬೆಳಿಗ್ಗೆ 6ರಿಂದ ಶ್ರೀ ದೇವರ ಉತ್ಸವ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ, 10ರಿಂದ ಕುಂಟಾರು ಶ್ರೀ ಮಹಾವಿಷ್ಣು ಕೃಪಾಶ್ರಿತ ಯಕ್ಷಗಾನ ಕಲಾ ಸಂಘ ಇದರ ಮಹಿಳಾ ತಂಡದವರಿಂದ ಯಕ್ಷಗಾನ ತಾಳಮದ್ದಳೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನದಾನ, ಸಂಜೆ 5ಕ್ಕೆ ಅಡೂರು ಮಂಡಲ ಸದಸ್ಯರಿಂದ ಗೀತಾಪಾರಾಯಣ, ರಾತ್ರಿ 8.30ಕ್ಕೆ ರಂಗಪೂಜೆ, ಅನ್ನದಾನ ನಡೆಯಲಿದೆ.
ಮಾ.31ರಂದು ಬೆಳಿಗ್ಗೆ 9ಕ್ಕೆ ಕುಂಟಾರು ಚಾಮುಂಡಿ ದೈವದ ನೇಮ, 11.30ಕ್ಕೆ ಪಡೈ ಚಾಮುಂಡಿ ದೈವದ ನೇಮ, ಸಂಜೆ 4ಕ್ಕೆ ಕುಂಟಾರು ಚಾಮುಂಡಿ ದೈವದ ನೇಮ ನಡೆಯಲಿದೆ.