ನವದೆಹಲಿ: ಇದ್ದಕ್ಕಿದ್ದಂತೆ ಕೋವಿಡ್ 19 ಸೋಂಕು ಪ್ರಕರಣ ಹೆಚ್ಚಾಗಿರುವುದು ಮತ್ತೊಂದು ಆತಂಕದ ಅಲೆ ಏಳುವ ಅನುಮಾನ ಮೂಡುವಂತೆ ಮಾಡಿದೆ. ಚೀನಾದಲ್ಲಿ ಇಂದು ಎರಡು ವರ್ಷಗಳಲ್ಲೇ ಅತ್ಯಧಿಕ ಎನ್ನುವಷ್ಟು ದೈನಂದಿನ ಪ್ರಕರಣ ವರದಿಯಾಗಿದೆ.
ನವದೆಹಲಿ: ಇದ್ದಕ್ಕಿದ್ದಂತೆ ಕೋವಿಡ್ 19 ಸೋಂಕು ಪ್ರಕರಣ ಹೆಚ್ಚಾಗಿರುವುದು ಮತ್ತೊಂದು ಆತಂಕದ ಅಲೆ ಏಳುವ ಅನುಮಾನ ಮೂಡುವಂತೆ ಮಾಡಿದೆ. ಚೀನಾದಲ್ಲಿ ಇಂದು ಎರಡು ವರ್ಷಗಳಲ್ಲೇ ಅತ್ಯಧಿಕ ಎನ್ನುವಷ್ಟು ದೈನಂದಿನ ಪ್ರಕರಣ ವರದಿಯಾಗಿದೆ.
ಚೀನಾದ ಸುಮಾರು 12 ಪಟ್ಟಣಗಳಲ್ಲಿ ಒಟ್ಟು 1 ಸಾವಿರಕ್ಕೂ ಅಧಿಕ ದೈನಂದಿನ ಕರೊನಾ ಪ್ರಕರಣಗಳು ವರದಿಯಾಗಿದ್ದು, ಇದು ಎರಡು ವರ್ಷಗಳಲ್ಲೇ ಅತ್ಯಧಿಕ ದೈನಂದಿನ ಪ್ರಕರಣ ಎಂಬುದಾಗಿ ಅಲ್ಲಿನ ಅಧಿಕೃತ ಮೂಲಗಳೇ ಹೇಳಿವೆ.
ಮತ್ತೊಂದೆಡೆ ಕರೊನಾ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಚೀನಾದ ಚಾಂಗ್ಚುನ್ ಕೈಗಾರಿಕಾ ಪ್ರದೇಶದ 90 ಲಕ್ಷ ನಿವಾಸಿಗಳಿರುವಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ವಿಧಿಸಲಾಗಿದೆ. ಇಲ್ಲಿನ ನಿವಾಸಿಗರು ಸೂಕ್ತ ಕಾರಣವಿಲ್ಲದೆ ಮನೆಯಿಂದ ಹೊರಗೆ ಹೋಗುವಂತಿಲ್ಲ ಹಾಗೂ ಅವರು ಮೂರು ಸುತ್ತಿನ ಸಾಮೂಹಿಕ ಪರೀಕ್ಷೆಗೆ ಒಳಗಾಗಬೇಕಿದೆ. ಎಲ್ಲರೂ ಮನೆಯಲ್ಲೇ ಇರುವಂತೆ ಹೇಳಲಾಗಿದ್ದು, ಪ್ರತಿ ಮನೆಯ ಒಬ್ಬ ವ್ಯಕ್ತಿಗಷ್ಟೇ ಹೊರಗೆ ಬಂದು ಆಹಾರ ಇತ್ಯಾದಿ ಅತ್ಯಗತ್ಯ ಪದಾರ್ಥ ಕೊಂಡುಹೋಗಲು ಅನುಮತಿ ನೀಡಲಾಗಿದೆ.