ಮಂಜೇಶ್ವರ: ಮೀಯಪದವು ಮಾಸ್ಟರ್ಸ್ ಆಟ್ರ್ಸ್ -ಸ್ಪೋಟ್ರ್ಸ್ ಕ್ಲಬ್ ನ ನೇತೃತ್ವದಲ್ಲಿ ಮೀಂಜ ಪಂಚಾಯತಿಗೆ ಒಳಪಟ್ಟ ಆಟಗಾರರ ಕ್ರಿಕೆಟ್ ಪಂದ್ಯಾಟ ಮೀಯಪದವು ಶಾಲಾ ಮೈದಾನದಲ್ಲಿ ಜರಗಿತು. ಪಂದ್ಯಾಟವನ್ನು ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಕೆ.ವಿ ರಾಧಾಕೃಷ್ಣ ಭಟ್ ಉದ್ಘಾಟಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ವಿತರಣಾ ಕಾಯಕ್ರಮದ ಅಧ್ಯಕ್ಷತೆಯನ್ನು ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಂಜೇಶ್ವರ ಪೊಲೀಸ್ ಠಾಣಾಧಿಕಾರಿ ಟೋನಿ ಜೆ ಮಟ್ಟಮ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೆ.ವಿ ಭಟ್, ಚಂದ್ರಶೇಖರ ಎಮ್.ಐ.ಎಂ, ಪುಷ್ಪರಾಜ್ ಶೆಟ್ಟಿ, ಜನಾರ್ಧನ್ ಎಸ್., ಮುನ್ನ ಬಪ್ಪಾಯಿತೊಟ್ಟಿ, ಜಾಫರ್, ಸಂದೇಶ್ ಹಾಗೂ ಶಶಾಂಕ್ ಉಪಸ್ಥಿತರಿದ್ದರು.
ಕ್ರಿಕೆಟ್ ಪಂದ್ಯಾಟದ ಪ್ರಥಮ ಬಹುಮಾನವನ್ನು ಗ್ರೀನ್ ಸ್ಟೈಕರ್ಸ್ ಮೀಂಜ, ದ್ವಿತೀಯ ಬಹುಮಾನವನ್ನು ಸುಲ್ತಾನ್ ಟೈಗರ್ಸ್ ಬೆಜ್ಜಂಗಳ, ತೃತೀಯ ಬಹುಮಾನವನ್ನು ಭಗತ್ ಫ್ರೆಂಡ್ಸ್ ಮುನ್ನಿಪ್ಪಾಡಿ ಹಾಗೂ ಚತುರ್ಥ ಬಹುಮಾನವನ್ನು ಇಂಡಿಯನ್ ಆರ್ಮಿ ಫ್ಯಾನ್ಸ್ ದಡ್ಡಂಗಡಿ ಪಡೆದುಕೊಂಡರು. ಸರಣಿ ಶೇಷ್ಠನಾಗಿ ಮುಸ್ತಾಫ, ಉತ್ತಮ ದಾಂಡಿಗನಾಗಿ ಶಿವ ದಡ್ಡಂಗಡಿ ಉತ್ತಮ ಎಸೆತಗಾರನಾಗಿ ನೌಷಾದ್ ಮಜೀರ್ಪಳ್ಳ, ಪಂದ್ಯ ಶ್ರೇಷ್ಟ ರಿಯಾಜ್ ಚಿಗುರುಪಾದೆ, ಉತ್ತಮ ವಿಕೆಟ್ ಕೀಪರ್ ಆಸಿಫ್ ಮೀಯಪದವು ಹಾಗೂ ಉತ್ತಮ ಕ್ಷೇತ್ರ ರಕ್ಷಕನಾಗಿ ಹಾತಿಮ್ ಆಯ್ಕೆಗೊಂಡರು.