ಬೀಜಿಂಗ್: ಚೀನಾದಲ್ಲಿ ಒಂದೆರಡು ತಿಂಗಳುಗಳಿಂದ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿದ್ದು ದೇಶಾದ್ಯಂತ ಮತ್ತೆ ಸಾಂಕ್ರಾಮಿಕ ಭೀತಿ ಎದುರಾಗಿದೆ. ಶಾಂಘೈ ನಗರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಅಧಿಕಾರಿಗಳು ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಿದ್ದಾರೆ.
2.6 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಶಾಂಘೈ ಚೀನಾದ ದೊಡ್ಡ ನಗರಗಳ ಪೈಕಿ ಒಂದು. ಲಾಕ್ ಡೌನ್ ಶೋಷಣೆ ಹಿನ್ನೆಲೆಯಲ್ಲಿ ನಗರದ ಸೂಪರ್ ಮಾರ್ಕೆಟ್ ಗಳಿಗೆ ಜನರು ಮುಗಿ ಬಿದ್ದಿದ್ದಾರೆ.
ಮನೆಯೊಳಗೇ ಉಳಿದುಕೊಳ್ಳುವ ಭಯದಿಂದ ಜನರು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ವಸ್ತುಗಳನ್ನು, ಆಹಾರ ಸಾಮಗ್ರಿಯನ್ನು ಖರೀದಿಸುತ್ತಿದ್ದಾರೆ. ಇದರಿಂದ ಕೃತಕ ಅಭಾವ ಸೃಷ್ಟಿಯಾಗುವ ಆತಂಕ ಎದುರಾಗಿದೆ. ಹಣಕಾಸು ಸೇರಿದಂತೆ ಅಗತ್ಯ ಸೇವೆಗೆ ಸಂಬಂಧಿಸಿದಂತೆ ಸಂಸ್ಥೆಯ ಉದ್ಯೋಗಿಗಳು ಕಚೇರಿಯಲ್ಲೇ ಉಳಿದುಕೊಳ್ಳಲು ನಿರ್ಧರಿಸಿದ್ದು, ಆಫೀಸನ್ನೇ ವಾಸಸ್ಥಳವನ್ನಾಗಿ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ.