ನವದೆಹಲಿ: ಈ ಪ್ರಕೃತಿಯೇ ವಿಸ್ಮಯಗಳ ಆಗರ. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಹೀಗೆ ಯಾರಿಗೂ, ಯಾವ ಕ್ಷೇತ್ರಕ್ಕೂ ನಿಲುಕದ ನಿಗೂಢಗಳು ಅದೆಷ್ಟೋ ಈ ಭೂಮಿಯ ಮೇಲೆ ನಡೆದಿವೆ, ನಡೆಯುತ್ತಲೇ ಇವೆ. ಅವುಗಳ ಪೈಕಿ ಕೆಲವು ಘಟನೆಗಳಿಗೆ ವೈಜ್ಞಾನಿಕ ಮೂಲ ನೀಡಿದರೂ, ಇನ್ನೆಷ್ಟೋ ಘಟನೆಗಳು ಊಹೆಗೂ ಮೀರಿದ್ದೇ ಆಗಿವೆ.
ನವದೆಹಲಿ: ಈ ಪ್ರಕೃತಿಯೇ ವಿಸ್ಮಯಗಳ ಆಗರ. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಹೀಗೆ ಯಾರಿಗೂ, ಯಾವ ಕ್ಷೇತ್ರಕ್ಕೂ ನಿಲುಕದ ನಿಗೂಢಗಳು ಅದೆಷ್ಟೋ ಈ ಭೂಮಿಯ ಮೇಲೆ ನಡೆದಿವೆ, ನಡೆಯುತ್ತಲೇ ಇವೆ. ಅವುಗಳ ಪೈಕಿ ಕೆಲವು ಘಟನೆಗಳಿಗೆ ವೈಜ್ಞಾನಿಕ ಮೂಲ ನೀಡಿದರೂ, ಇನ್ನೆಷ್ಟೋ ಘಟನೆಗಳು ಊಹೆಗೂ ಮೀರಿದ್ದೇ ಆಗಿವೆ.
ಅಂಥದ್ದೇ ಒಂದು ನಿಗೂಢ ಪ್ರಶ್ನೆ ಈಗ ವಿಜ್ಞಾನ ಲೋಕವನ್ನು ಕಾಡುತ್ತಿದೆ. ಮತ್ಸ್ಯ ಕನ್ಯೆ ಎಂದಾಕ್ಷಣ ಚಿಕ್ಕಮಕ್ಕಳ ಕಥೆಗಳು ನೆನಪಾಗುತ್ತವೆ. ಮಕ್ಕಳಿಗೆ ತುಂಬಾ ಇಷ್ಟವಾಗುವ ಈ ಕಥೆಗಳು ದೊಡ್ಡವರಿಗೂ ಇಷ್ಟವಾಗುವುದಿವೆ, ಇವುಗಳ ಕುರಿತಂತೆ ಹಲವಾರು ಕಾಲ್ಪನಿಕ ಚಿತ್ರಗಳೂ ಬಂದಿವೆ. ಆದರೆ ಈ ಕಲ್ಪನೆ ಹುಟ್ಟಿಕೊಂಡಿದ್ದು ಹೇಗೆ? ಹಾಗಿದ್ದರೆ ನಿಜವಾಗಿಯೂ ಮತ್ಸ್ಯಕನ್ಯೆಗಳು ಇದ್ದರೆ ಎಂಬ ಪ್ರಶ್ನೆಗೆ ಎಲ್ಲರೂ ಸಹಜವಾಗಿ ಹೇಳುವುದು ಇದೊಂದು ಕಾಲ್ಪನಿಕ ಪಾತ್ರ ಮಾತ್ರ ಎಂದು.
ಆದರೆ ಇದೀಗ ಮತ್ಸ್ಯಕನ್ಯೆಯರನ್ನೇ ಹೋಲುವ ಅವಶೇಷಗಳು ಉತ್ಕನದ ವೇಳೆ ಸಿಕ್ಕಿದ್ದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸುಮಾರು 300 ವರ್ಷಗಳ ಹಿಂದೆ ಇದ್ದ ಜೀವಿಗಳ ಅವಶೇಷಗಳು ಸಿಕ್ಕಿದ್ದು, ಅದು ಚಿತ್ರಗಳಲ್ಲಿ ಕಂಡುಬರುವ ಮತ್ಸ್ಯಕನ್ಯೆಗಳ ರೀತಿಯಲ್ಲಿ ಕಾಣಿಸುತ್ತಿದೆ. ಮನುಷ್ಯನ ಮುಖ, ಮೀನಿನ ದೇಹವನ್ನು ಅದು ಹೊಂದಿರುವಂತೆ ಕಾಣಿಸುತ್ತಿದೆ.
ಜಪಾನಿನ ಕರಾವಳಿಯ ಬಳಿ ಇದು ಕಂಡು ಬಂದಿದೆ. ಈ ಅವಶೇಷಕ್ಕೆ ಚೂಪಾದ ಹಲ್ಲುಗಳು ಮತ್ತು ಎರಡು ಕೈಗಳು ಇವೆ. ಹಣೆಯ ಮೇಲೆ ಕೂದಲು ಇದೆ. 1736 ಮತ್ತು 1741 ರ ನಡುವೆ ಇದು ಜಪಾನಿನ ಕರಾವಳಿಯಲ್ಲಿ ಪೆಸಿಫಿಕ್ ಮಹಾಸಾಗರದಲ್ಲಿ ಜೀವಿಸಿದ್ದು ಎಂದು ಊಹಿಸಲಾಗಿದೆ.
ಮತ್ಸ್ಯಕನ್ಯೆಯ ಮಾಂಸವನ್ನು ತಿನ್ನುವುದರಿಂದ ಮನುಷ್ಯ ಅಮರನಾಗುತ್ತಾನೆ ಎನ್ನುವ ಕಲ್ಪನೆ ಆಗ ಇತ್ತು ಎಂದು ಹೇಳಲಾಗುತ್ತಿದೆ. ಕುರಾಶಿಕಿ ವಿಜ್ಞಾನ ಮತ್ತು ಕಲಾ ವಿಶ್ವವಿದ್ಯಾಲಯದ ಸಂಶೋಧಕರು ಇದರ ರಹಸ್ಯ ತಿಳಿಯಲು ಸಿಟಿ ಸ್ಕ್ಯಾನ್ ಮಾಡಿದ್ದಾರೆ. ಜಪಾನಿನಲ್ಲಿ ಮತ್ಸ್ಯಕನ್ಯೆಯರಿಗೆ ಸಂಬಂಧಿಸಿದ ಅನೇಕ ಕಥೆಗಳಿದ್ದು, ಇದು ಕೂಡ ಅದೇ ಇದ್ದಿರಬಹುದು ಎನ್ನಲಾಗಿದೆ. ಇನ್ನಷ್ಟೇ ಸತ್ಯಾಂಶ ಹೊರಬರಬೇಕಿದೆ.