ಬದಿಯಡ್ಕ: ಖ್ಯಾತ ಹಾಸ್ಯ ಹಾಗೂ ಹನಿಗವನ ಸಾಹಿತಿ ವೆಂಕಟ ಭಟ್ ಎಡನೀರು ಅವರ '302 ಎಳ್ಳುಂಡೆ' ಹನಿಗವನ ಸಂಕಲನದ ಬಿಡುಗಡೆ ಸಮಾರಂಭ ಮಾ. 13ರಂದು ಬೆಳಗ್ಗೆ 10ಕ್ಕೆ ಎಡನೀರು ಶ್ರೀಮಠದ ಸಭಾಂಗಣದಲ್ಲಿ ಜರುಗಲಿದೆ.
ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಕೃತಿ ಬಿಡುಗಡೆಗೊಳಿಸಿ ಆಶೀರ್ವಚನ ನೀಡುವರು. ಹಿರಿಯ ಕವಿ ರಾಧಾಕೃಷ್ಣ ಉಳಿಯತ್ತಡ್ಕ ಕೃತಿ ಪರಿಚಯ ನೀಡುವರು. ಕನ್ನಡದ ವಿಶ್ರಾಂತ ಪ್ರಾಧ್ಯಾಪಕ ಹರಿಕೃಷ್ಣ ಭರಣ್ಯ ಅಧ್ಯಕ್ಷತೆ ವಹಿಸುವರು. ನಿವೃತ್ತ ಪ್ರಾಂಶುಪಾಲ ರಾಜೇಂದ್ರ ಕಲ್ಲೂರಾಯ, ಮಣಿಪಾಲ ಆಯುರ್ವೇದ ಕಾಲೇಜು ಪ್ರಾಧ್ಯಾಪಕ ಡಾ. ಸುರೇಶ್ ನೆಗಳಗುಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.