ತಿರುವನಂತಪುರ: ಸೆಕ್ರೆಟರಿಯೇಟ್‍ನಲ್ಲಿ ಹೊಸ ಲಿಫ್ಟ್ ಅಳವಡಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆದೇಶಿಸಿದ್ದಾರೆ. ಲಿಫ್ಟ್ ಅಳವಡಿಕೆಗೆ ರೂ.34.10 ಲಕ್ಷ ಮಂಜೂರಾರು ಮಾಡಲಾಗಿದೆ. ಮುಖ್ಯಮಂತ್ರಿಗಳ ಕಚೇರಿ ಇರುವ ಸೆಕ್ರೆಟರಿಯೇಟ್ ನ ನಾರ್ತ್ ಬ್ಲಾಕ್ ನ ಪಶ್ಚಿಮ ಭಾಗದಲ್ಲಿ ಲಿಫ್ಟ್ ಇದೆ. ಮುಖ್ಯಮಂತ್ರಿ ಸೇರಿದಂತೆ ಸಚಿವರು ಬಳಸುವ ಲಿಫ್ಟ್ ಇದಾಗಿದೆ.
ವಿದ್ಯುತ್ ವಿಭಾಗದ ಕಾರ್ಯಪಾಲಕ ಅಭಿಯಂತರರು ಸಲ್ಲಿಸಿದ ಅಂದಾಜಿನ ಆಧಾರದಲ್ಲಿ ಲೋಕೋಪಯೋಗಿ ಇಲಾಖೆ ನೂತನ ಲಿಫ್ಟ್ ಅಳವಡಿಕೆಗೆ ಇದೇ ತಿಂಗಳ 4ರಂದು ಅನುದಾನ ಮಂಜೂರು ಮಾಡಿತ್ತು. ಆರ್ಥಿಕ ಮುಗ್ಗಟ್ಟಿನಿಂದಾಗಿ ಸಂಪೂರ್ಣ ಯೋಜನಾ ವೆಚ್ಚವನ್ನೂ ಭರಿಸಲು ಹಣಕಾಸು ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಈ ಮಧ್ಯೆ, ಅಂತಹ ಭಾರೀ ವೆಚ್ಚದ ಅಳವಡಿಕೆ ಅಚ್ಚರಿ ಮೂಡಿಸಿದೆ.
ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಹೌಸ್‍ಕೀಪಿಂಗ್ ಸೆಲ್‍ನಿಂದ ಲಿಫ್ಟ್‍ಗೆ ಆದೇಶ ನೀಡಲಾಗಿದೆ. ಸೆಕ್ರೆಟರಿಯೇಟ್‍ನಲ್ಲಿರುವ ಅತ್ಯುತ್ತಮ ಲಿಫ್ಟ್ ಒಂದನ್ನು ಸಿಎಂ ಬಳಸುತ್ತಾರೆ. ಈ ಪರಿಸ್ಥಿತಿಯಲ್ಲಿ ಹೊಸ ಲಿಫ್ಟ್ ಅನ್ನು ಏಕೆ ಅಳವಡಿಸಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಆರ್ಥಿಕ ಮುಗ್ಗಟ್ಟಿನಿಂದ ವಷಾರ್ಂತ್ಯದ ಖರ್ಚಿಗೆ ಸಾಲ ಮಾಡುವ ಪರಿಸ್ಥಿತಿ ಸರಕಾರಕ್ಕೆ ಇದೆ. ಇಂತಹ ಹೆಚ್ಚುವರಿ ವೆಚ್ಚಗಳು ಹಣಕಾಸು ಇಲಾಖೆಗೆ ಹಿನ್ನಡೆಯಾಗಲಿದೆ ಎಂದು ಅಂದಾಜಿಸಲಾಗಿದೆ.