HEALTH TIPS

ಕೇರಳದಲ್ಲಿ ಇಂದು 346 ಮಂದಿಗೆ ಕೊರೊನಾ: 11,939 ಮಾದರಿಗಳ ಪರೀಕ್ಷೆ

               ತಿರುವನಂತಪುರ: ರಾಜ್ಯದಲ್ಲಿ ಇಂದು 346 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಎರ್ನಾಕುಳಂ 76, ತಿರುವನಂತಪುರ 54, ಕೊಟ್ಟಾಯಂ 40, ತ್ರಿಶೂರ್ 34, ಕೊಲ್ಲಂ 29, ಕೋಝಿಕ್ಕೋಡ್ 28, ಪತ್ತನಂತಿಟ್ಟ 20, ಆಲಪ್ಪುಳ 15, ಇಡುಕ್ಕಿ 15, ಕಣ್ಣೂರು 10, ಪಾಲಕ್ಕಾಡ್ 10, ಮಲಪ್ಪುರಂ 8, ಕಾಸರಗೋಡು ವಯನಾಡ್ 6, ಕಾಸರಗೋಡು 1 ಎಂಬಂತೆ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಗಳಲ್ಲಿ 11,939 ಮಾದರಿಗಳನ್ನು ಪರೀಕ್ಷಿಸಲಾಗಿದೆ.

                ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 14,022 ಮಂದಿ ಜನರು ನಿಗಾದಲ್ಲಿದ್ದಾರೆ. ಇವರಲ್ಲಿ 13,673 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾರೆ ಮತ್ತು 349 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ. ಒಟ್ಟು 54 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ, 3682 ಕೊರೋನಾ ಪ್ರಕರಣಗಳಲ್ಲಿ, ಕೇವಲ 11.2 ಶೇಕಡಾ ಜನರು ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

               ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ ಓರ್ವ ವ್ಯಕ್ತಿ ಮಾತ್ರ ಮೃತರಾಗಿದ್ದಾರೆ.  ಇದಲ್ಲದೆ, ಹಿಂದಿನ ದಿನಗಳಲ್ಲಿ ದಾಖಲೆಗಳ ವಿಳಂಬದಿಂದ 3 ಸಾವುಗಳು ವರದಿಯಾಗಿವೆ. ಸುಪ್ರೀಂ ಕೋರ್ಟ್‍ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಮೇಲ್ಮನವಿಯಿಂದ 21 ಸಾವುಗಳು ಸಂಭವಿಸಿವೆ. ಇದರಿಂದ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 67,822ಕ್ಕೆ ಏರಿಕೆಯಾಗಿದೆ. ಇಂದು ದೃಢಪಟ್ಟಿರುವ 3 ಪ್ರಕರಣಗಳು ಹೊರ ರಾಜ್ಯದಿಂದ ಬಂದವರು. ಸಂಪರ್ಕದಿಂದ 302 ಮಂದಿ ಜನರಿಗೆ ಸೋಂಕು ತಗುಲಿದೆ. 37 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ನಾಲ್ವರು ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಪತ್ತೆಯಾಗಿದೆ. 

                     ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 471 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 81, ಕೊಲ್ಲಂ 11, ಪತ್ತನಂತಿಟ್ಟ 26, ಆಲಪ್ಪುಳ 7, ಕೊಟ್ಟಾಯಂ 44, ಇಡುಕ್ಕಿ 37, ಎರ್ನಾಕು|ಳಂ 143, ತ್ರಿಶೂರ್ 31, ಪಾಲಕ್ಕಾಡ್ 3, ಮಲಪ್ಪುರಂ 17, ಕೋಝಿಕ್ಕೋಡ್ 45, ವಯನಾಡ್ 22, ಕಣ್ಣೂರು 0 ಮತ್ತು ಕಾಸರಗೋಡು 4 ಮಂದಿ ಎಂಬಂತೆ ಗುಣಮುಖರಾಗಿದ್ದಾರೆ.  ಇದರೊಂದಿಗೆ 3682 ಮಂದಿಗೆ ಸೋಂಕು ತಗುಲಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 64,59,057 ಮಂದಿ ಜನರು ಕೊರೊನಾದಿಂದ ಮುಕ್ತರಾಗಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries