HEALTH TIPS

4 ವರ್ಷಗಳ ಪದವಿ ವಿದ್ಯಾರ್ಥಿಗಳಿಗೆ ಪಿಎಚ್ಡಿ ಅಧ್ಯಯನಕ್ಕೆ ಅವಕಾಶ: 7.5 ಸಿಜಿಪಿಎ ಗ್ರೇಡಿಂಗ್ ಪಡೆದವರು ಅರ್ಹರು

              ನೂತನ ಶಿಕ್ಷಣ ನೀತಿ ಜಾರಿಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸ್ನಾತಕ ಪದವಿ ಶಿಕ್ಷಣಗಳಿಗೆ ಸಂಬಂಧಿಸಿ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ವು ಪರಿಷ್ಕೃತ ನಿಯಮಾವಳಿಗಳನ್ನು ಗುರುವಾರ ಪ್ರಕಟಿಸಿದೆ. ಅವುಗಳ ಪ್ರಕಾರ ಸರಾಸರಿ ಕನಿಷ್ಠ 7.5 ಸಿಜಿಪಿಎ (ಕ್ಯುಮುಲೇಟಿವ್ ಗ್ರೇಡ್ ಪಾಯಿಂಟ್ ಆವರೇಜ್) ದರ್ಜೆಯನ್ನು ಪಡೆದ ನಾಲ್ಕು ವರ್ಷಗಳ ಸ್ನಾತಕ ಪದವಿ ಕೋರ್ಸ್‌ನ ವಿದ್ಯಾರ್ಥಿಗಳು ಪಿಎಚ್ಡಿ ಅಧ್ಯಯನಕ್ಕೆ ಅರ್ಹತೆಯನ್ನು ಪಡೆಯುತ್ತಾರೆ.

              ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ಪಿಎಚ್ಡಿ ಅಧ್ಯಯನಕ್ಕೆ ಅವಕಾಶ ನೀಡಜುವ ಯುಜಿಸಿಯ ವಿನೂತನ ಕರಡು ತಿದ್ದುಪಡಿ (ಪಿಎಚ್ಡಿ ಪದವಿ ಪ್ರದಾನ ನಿಯಮಾವಳಿಗಳು ಹಾಗೂ ಕನಿಷ್ಠ ಮಾನದಂಡಗಳು) ಕಾನೂನನ್ನು 2022ನ್ನು ಮಾರ್ಚ್ 10ರಂದು ನಡೆದ ಆಯೋಗದ 556ನೇ ಸಭೆಯಲ್ಲಿ ಅನುಮೋದಿಸಲಾಗಿತ್ತು.

               2020ರ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
                ಈ ಕರಡು ನಿಯಮಾವಳಿಗಳನ್ನು ಶೀಘ್ರದಲ್ಲೇ ಸಾರ್ವಜನಿಕರ ಸಲಹೆ ಸೂಚನೆಗಳನ್ನು ಸ್ವೀಕರಿಸುವುದಕ್ಕಕಾಗಿ ಬಹಿರಂಗವಾಗಿ ಪ್ರಕಟಿಸಲಾಗುವುದು ಎಂದು ಅವು ಹೇಳಿವೆ.
                  ಈ ದಾಖಲೆಗಳ ಪ್ರಕಾರ ಪ್ರವೇಶಾತಿ ಕುರಿತ ವಿಧಾನದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗುವುದು, 2020ರ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಎಂಫಿಲ್ ಪದವಿಯ ರದ್ದತಿ ಮತ್ತು ನಾಲ್ಕು ವರ್ಷಗಳ ಪದವಿ ಕಾರ್ಯಕ್ರಮಗಳ ಜಾರಿಯ ಆನಂತರದ ಪದವಿ ಶಿಕ್ಷಣಕ್ಕೆ ಸಂಬಂಧಿಸಿದ ಅರ್ಹತಾ ಮಾನದಂಡಗಳ ಕುರಿತಾದ ಮಾರ್ಗದರ್ಶಿ ಸೂತ್ರಗಳನ್ನು ಕೂಡಾ ಪರಿಷ್ಕರಿಸಲಾಗಿದೆ.
               ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ)/ ಜೂನಿಯರ್ ಸಂಶೋಧನಾ ಫೆಲೋಶಿಪ್ (ಎನ್‌ಇಟಿ-ಜೆಆರ್‌ಎಫ್) ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶೇ.60 ಸೀಟುಗಳನ್ನು ಮೀಸಲಿಡಲಾಗುವುದು.
            2020ರ ನೂತನ ಶಿಕ್ಷಣ ನೀತಿಯಡಿ ವಿಶ್ವವಿದ್ಯಾನಿಲಯಗಳು ಹಾಗೂ ಶಾಲಾ ಕಾಲೇಜುಗಳು ನಾಲ್ಕು ವರ್ಷಗಳ ಪದವಿ ಶಿಕ್ಷಣವನ್ನು ಜಾರಿಗೆ ತರಲಿವೆ. ಜವಾಹರಲಾಲ್ ನೆಹರೂ ವಿವಿ ಹಾಗೂ ದಿಲ್ಲಿ ವಿವಿ ಸೇರಿದಂತೆ ಹಲವಾರು ವಿಶ್ವವಿದ್ಯಾನಿಲಯಗಳು ಈಗಾಗಲೇ ಈ ಯೋಜನೆಗಳನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತರಲು ನಿರ್ಧರಿಸಿವೆ. ನಾಲ್ಕು ವರ್ಷಗಳ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದ ಬಳಿಕ ವಿದ್ಯಾರ್ಥಿಗ ಸಂಶೋಧನಾ ಕ್ಷೇತ್ರದಲ್ಲಿ ಸ್ನಾತಕ ಪದವಿಯ ಜೊತೆಗೆ ಹಾನರ್ಸ್ ಪದವಿಯನ್ನು ಕೂಡಾ ಪಡೆಯುತ್ತಾರೆ.
              ಪ್ರಸ್ತಾವಿತ ನೂತನ ನಿಯಮಾವಳಿಗಳ ಪ್ರಕಾರ ನಾಲ್ಕು ವರ್ಷಗಳ ಪದವಿ ಶಿಕ್ಷಣ ಪೂರ್ತಿಗೊಳಿಸಿದ ವಿದ್ಯಾರ್ಥಿಗಳು 7.5 ಸಿಜಿಪಿಎ ಪಡೆದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ನಾತಕೋತ್ತರ ವಿದ್ಯಾರ್ಥಿಗಳ ಹಾಗೆ ಪಿಎಚ್ಡಿ ಅಧ್ಯಯನಕ್ಕೆ ಅರ್ಹರಾಗುತ್ತಾರೆ.
                ನೂತನ ಶೈಕ್ಷಣಿಕ ಬದಲಾವಣೆಗಳ ಜಾರಿಯನ್ನು ಯುಜಿಸಿ ಅಧ್ಯಕ್ಷ ಜಗದೀಶ್ಕುಮಾರ್ ದೃಢಪಡಿಸಿದ್ದಾರೆ. ನಾಲ್ಕು ವರ್ಷಗಳ ಸ್ನಾತಕ ಪದವಿ ಕಾರ್ಯಕ್ರಮವು ಹಲವಾರು ವಿಧಗಳಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ.ವಿವಿಧ ವಿಷಯಗಳ ಸಂಶೋಧನೆಯಲ್ಲಿ ಆಸಕ್ತರಾದ ವಿದ್ಯಾರ್ಥಿಗಳು ಅಂತಿಮ ವರ್ಷದಲ್ಲಿ ವಿವಿಧ ವಿಷಯಗಳಲ್ಲಿ ಸಂಶೋಧನೆಯನ್ನು ನಡೆಸಬಹುದಾಗಿದೆ ಇಲ್ಲವೇ ಒಂದು ವಿಷಯದ ಬಗ್ಗೆ ಸಂಶೋಧನೆಯನ್ನು ನಡೆಸಬಹುದಾಗಿದೆ. ನಾಲ್ಕು ವರ್ಷಗಳ ಸ್ನಾತಕ ಪದವಿಯನ್ನು ಅಧ್ಯಯನ ಮಾಡಿದವರು ಪಿಎಚ್ಡಿ ಅಧ್ಯಯನಕ್ಕೆ ಅರ್ಹರಾಗಿದ್ದಾರೆ. ಇದರಿಂದಾಗಿ ನಮ್ಮ ದೇಶದ ಸಂಶೋಧನಾ ಪರಿಸರ ವ್ಯವಸ್ಥೆಗೆ ಉತ್ತೇಜನ ನೀಡಲಿದೆ.
                ಇದರ ಜೊತೆಗೆ ಎಂಫಿಲ್‌ನಲ್ಲಿ ಕನಿಷ್ಠ ಶೇ.55 ಅಂಕಗಳನ್ನು ಪಡೆದವರು ಪಿಎಚ್ಡಿ ಅಧ್ಯಯನಕ್ಕೆ ಅರ್ಹರಾಗಿರುತ್ತಾರೆ. 2022-23ರಿಂದ ಎಂಫಿಎಲ್ ಪದವಿಯನ್ನು ರದ್ದುಪಡಿಸಲಾಗುವುದು ಎಂದು ಯುಜಿಸಿ ಬಿಡುಗಡೆಗೊಳಿಸಿದ ದಾಖಲೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries