ಬದಿಯಡ್ಕ: ಪೆರಡಾಲ ಉದನೇಶ್ವರ ಯಕ್ಷಗಾನ ಕಲಾ ಸಂಘದ 40ನೇ ವಾರ್ಷಿಕೋತ್ಸವದ ಅಂಗವಾಗಿ ಶಿವರಾತ್ರಿಯ ಪುಣ್ಯದಿನದಂದು ವಾರ್ಷಿಕೋತ್ಸವದ ಪ್ರಯುಕ್ತ ಸಭಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಆಡಳಿತ ಮೊಕ್ತೆಸರ ನ್ಯಾಯವಾದಿ ವೆಂಕಟ್ರಮನ ಭಟ್ ಉದ್ಘಾಟಿಸಿದರು. ಶ್ರೀ ಉದನೇಶ್ವರ ಭಕ್ತವೃಂದದ ಅಧ್ಯಕ್ಷ ಶ್ರೀ ತಿರುಪತಿ ಕುಮಾರ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ ಮನುಷ್ಯ ಜೀವನದಲ್ಲಿ ಸಾತ್ವಿಕ ಚಿಂತನೆಯನ್ನು ರೂಢಿಸಿಕೊಳ್ಳಬೇಕಾಗಿದೆ. ಇಂದಿನ ಯುವಜನಾಂಗದ ಮಕ್ಕಳು ಪಾಶ್ಚಿಮಾತ್ಯ ಸಂಸ್ಕøತಿಯನ್ನು ಅನುಸರಿಸಿಕೊಂಡು ಬೆಳೆಯುತ್ತಿದ್ದಾರೆ, ಇದನ್ನು ಹೆತ್ತವರು ತಿದ್ದುವ ಕೆಲಸ ಮಾಡಿ ನಮ್ಮ ಹಿಂದೂ ಸಂಸ್ಕೃತಿ ಆಚಾರ, ಭಜನೆ, ಧಾರ್ಮಿಕ ಚಿಂತನೆ, ಅನುಷ್ಠಾನ ಕಲಾರೂಪವನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕಾದು ಅನಿವಾರ್ಯವಾಗಿದೆ ಎಂದರು.
ದೈವನರ್ತಕ ಡಾ.ರವೀಶ್ ಪರವ ಪಡುಮಲೆ ಕಾರ್ಯಕ್ರಮಕ್ಕೆ ಶುಭಾಶಂಸನೆ ಮಾಡಿದರು. ಟ್ರಸ್ಟಿಗಳಾದ ಪಿಜಿ ಜಗನ್ನಾಥ ರೈ, ಕೃಷ್ಣ ಪೆರಡಾಲ, ಜಗದೀಶ್ ಪೆರಡಾಲ, ಭಕ್ತವೃಂದದ ಪದಾಧಿಕಾರಿಗಳಾದ ಚಂದ್ರಹಾಸ, ಸದಾಶಿವ ಪೆರಡಾಲ, ಯೋಗೀಶ್ ಪೆರಡಾಲ, ಪರಮೇಶ್ವರ ನಾಯ್ಕ, ಪುರುಷೋತ್ತಮ ಆಚಾರ್ಯ, ಉದನೇಶ್ವರ ಮಹಿಳಾ ವೃಂದ ಅಧ್ಯಕ್ಷೆ ರಾಧಾ, ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಸಂತ ಬಾರಡ್ಕ ಹಾಡಿದ ಉದನೇಶ್ವರ ಆಲ್ಬಮ್ ಸಾಂಗ್ ಬಿಡುಗಡೆ ಗೊಳಿಸಲಾಯಿತು. ಭಕ್ತವೃಂದದ ಕಾರ್ಯದರ್ಶಿ ರಾಮ ಮುರಿಯಂಕ್ಕೂಡ್ಲು ಸ್ವಾಗತಿಸಿ, ಶ್ರೀ ಉದನೇಶ್ವರ ಸೇವಾ ಸಮಿತಿ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಕಾರ್ಯಕ್ರಮ ನಿರೂಪಿಸಿದರು. ಪದ್ಮನಾಮ ಶೆಟ್ಟಿ ವಳಮಲೆ ವಂದಿಸಿದರು. ಬಲಿಕ ನಲವತ್ತನೇ ವಾರ್ಷಿಕೋತ್ಸವದ ಪ್ರಯುಕ್ತ ಬಪ್ಪನಾಡು ಕ್ಷೇತ್ರ ಮಹಾತ್ಮೆ ಮೈಂದ-ದ್ವಿವಿದ ಕಾಳಗ ಯಕ್ಷಗಾನ ಬಯಲಾಟ ಜರಗಿತು.