HEALTH TIPS

ರಾಜ್ಯದಲ್ಲಿ ಇಂದು 400 ಮಂದಿಗೆ ಕೊರೊನಾ ಪತ್ತೆ: 14,913 ಮಾದರಿಗಳ ಪರೀಕ್ಷೆ

                  ತಿರುವನಂತಪುರ: ರಾಜ್ಯದಲ್ಲಿ ಇಂದು 400 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಎರ್ನಾಕುಳಂ 88, ತಿರುವನಂತಪುರ 56, ಕೊಟ್ಟಾಯಂ 55, ಕೋಝಿಕ್ಕೋಡ್ 37, ಪತ್ತನಂತಿಟ್ಟ 30, ಕೊಲ್ಲಂ 27, ಇಡುಕ್ಕಿ 24, ತ್ರಿಶೂರ್ 19, ಕಣ್ಣೂರು 16, ವಯನಾಡ್ 15, ಆಲಪ್ಪುಳ 12,ಕಾಸರಗೋಡು 8, ಪಾಲಕ್ಕಾಡ್ 8, ಮಲಪ್ಪುರಂ 5 ಎಂಬಂತೆ ಕೋವಿಡ್ ಪತ್ತೆಯಾಗಿದೆ. 

                 ಕಳೆದ 24 ಗಂಟೆಗಳಲ್ಲಿ 14,913 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪ್ರಸ್ತುತ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 14,513 ಮಂದಿ ಜನರನ್ನು ನಿಗಾ ವಹಿಸಲಾಗಿದೆ. ಇವರಲ್ಲಿ 14,093 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾರೆ ಮತ್ತು 420 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 61 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

                 ಪ್ರಸ್ತುತ, 3833 ಕೊರೊನಾ ಪ್ರಕರಣಗಳಲ್ಲಿ, ಕೇವಲ 12.5 ಶೇಕಡಾ ಜನರು ಮಾತ್ರ ಆಸ್ಪತ್ರೆಗಳು / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

                   ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ ಯಾರೂ ಮೃತರಾಗಿಲ್ಲ. ಇದಲ್ಲದೆ, ಹಿಂದಿನ ದಿನಗಳಲ್ಲಿ ದಾಖಲೆಗಳ ಸ್ವೀಕೃತಿಯ ವಿಳಂಬದಿಂದ ಮೂರು ಸಾವುಗಳು ಮತ್ತು ಸುಪ್ರೀಂ ಕೋರ್ಟ್‍ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ್ದರಿಂದ 22 ಸಾವುಗಳು ವರದಿಯಾಗಿವೆ. ಇದರಿಂದ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 67,797ಕ್ಕೆ ಏರಿಕೆಯಾಗಿದೆ.

                     ಇಂದು, ದೃಢಪಡಿಸಿದ ಪ್ರಕರಣಗಳಲ್ಲಿ ಒಬ್ಬರು ರಾಜ್ಯದ ಹೊರಗಿನವರು. ಸಂಪರ್ಕದಿಂದ 366 ಮಂದಿ ಜನರಿಗೆ ಸೋಂಕು ತಗುಲಿದೆ. 30 ಮಂದಿಯ ಸಂಪರ್ಕದ ಮೂಲ ಸ್ಪಷ್ಟವಾಗಿಲ್ಲ. ಮೂವರು ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಪತ್ತೆಯಾಗಿದೆ. 593 ಮಂದಿ ಜನರು ರೋಗದಿಂದ  ಗುಣಮುಖರಾಗಿದ್ದಾರೆ. ತಿರುವನಂತಪುರ 91, ಕೊಲ್ಲಂ 58, ಪತ್ತನಂತಿಟ್ಟ 38, ಆಲಪ್ಪುಳ 4, ಕೊಟ್ಟಾಯಂ 76, ಇಡುಕ್ಕಿ 73, ಎರ್ನಾಕುಳಂ 109, ತ್ರಿಶೂರ್ 25, ಪಾಲಕ್ಕಾಡ್ 8, ಮಲಪ್ಪುರಂ 17, ಕೋಝಿಕ್ಕೋಡ್ 55, ವಯನಾಡ್ 17, ಕಣ್ಣೂರು 17 ಮತ್ತು ಕಾಸರಗೋಡು 5 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 3833 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 64,58,586 ಮಂದಿ ಕೊರೊನಾದಿಂದ ಮುಕ್ತರಾಗಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries