ಕೊಚ್ಚಿ: ಚಿನ್ನದ ಬೆಲೆ ಇಂದು 2022ರ ಗರಿಷ್ಠ ಮಟ್ಟಕ್ಕೆ ತಲುಪಿದೆ. ಇಂದು ಪವನ್ ಗೆ 1,040 ರೂ.ಹೆಚ್ಚಳಗೊಂಡು 40,560 ರೂ.ಆಗಿದೆ. ಪ್ರತಿ ಗ್ರಾಂಗೆ 130 ರೂ.ಗೆ ಏರಿಕೆಯಾಗಿ 5,070 ರೂ.ತಲಪಿದೆ.
ಈ ತಿಂಗಳ ಅತ್ಯಂತ ಕಡಿಮೆ ಬೆಲೆ ಪ್ರತಿ ಗ್ರಾಂಗೆ 4,670 ರೂ. ಮತ್ತು ಮಾರ್ಚ್ 1 ರಂದು ಪ್ರತಿ ಪವನ್ ಗೆ 37,360 ರೂ.ಆಗಿತ್ತು. ಅಂದಿನಿಂದ ಚಿನ್ನದ ಬೆಲೆ ಪ್ರತಿ ಪವನ್ ಗೆ 3,200 ರೂ., ಗ್ರಾಂಗೆ 400 ರೂ. ಹೆಚ್ಚಳವಾಗಿದೆ. ಕಳೆದ ಎರಡು ದಿನಗಳಿಂದ ಪ್ರತಿ ಗ್ರಾಂಗೆ 4,940 ರೂ., ಪವನ್‌ಗೆ 39,520 ರೂ.ಹೆಚ್ಚಳವಾಗಿದೆ.