ಕಾಸರಗೋಡು: ಏಳರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮದರಸಾ ಶಿಕ್ಷಕನಿಗೆ 45 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಕರ್ನಾಟಕದ ಬಂಟ್ವಾಳ ಮೂಲದ ಅಬ್ದುಲ್ ಮಜೀದ್ ಶಿಕ್ಷೆಗೆ ಗುರಿಯಾದವರು. ಆರೋಪಿಗೆ ಜೈಲು ಶಿಕ್ಷೆ ಜತೆಗೆ 3 ಲಕ್ಷ ರೂ.ದಂಡವೂ ವಿಧಿಸಲಾಗಿದೆ.
2016ರ ಜನವರಿಯಲ್ಲಿ ಈ ಘಟನೆ ನಡೆದಿತ್ತು. ಈ ಅವಧಿಯಲ್ಲಿ ಕಾಸರಗೋಡು ನಗರದ ಸಮೀಪದ ಮದರಸಾದಲ್ಲಿ ಕೆಲಸ ಮಾಡುತ್ತಿದ್ದ. ಇದೇ ವೇಳೆ ಅಬ್ದುಲ್ ಮಜೀದ್ ಮದರಸಾ ವಿದ್ಯಾರ್ಥಿನಿಯೊಂದಿಗೆ ಸ್ನೇಹ ಬೆಳೆಸಿ ಕಿರುಕುಳ ನೀಡಲಾರಂಭಿಸಿದ್ದ.
ಮಗುವಿನ ವರ್ತನೆಯಿಂದ ಅನುಮಾನಗೊಂಡ ಶಾಲಾ ಶಿಕ್ಷಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರದ ತನಿಖೆಯಲ್ಲಿ ಆತ ಏಳು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ. ನಂತರ ಮದರಸಾ ಶಿಕ್ಷಕನನ್ನು ಬಂಧಿಸಲಾಯಿತು.