ತಿರುವನಂತಪುರ: ಮಾ.28 ಮತ್ತು 29ರಂದು ನಡೆಯಲಿರುವ 48 ಗಂಟೆಗಳ ಸಾರ್ವತ್ರಿಕ ಮುಷ್ಕರದಲ್ಲಿ ಮೋಟಾರು ವಾಹನ ಕಾರ್ಮಿಕರು ಕೂಡ ಭಾಗವಹಿಸಲಿದ್ದಾರೆ. ಹಾಗಾಗಿ ವಾಹನ ಸಂಚಾರ ಇರುವುದಿಲ್ಲ ಎಂದು ಜಂಟಿ ಕಾರ್ಮಿಕ ಸಂಘಟನೆ ತಿಳಿಸಿದೆ. ಮಾ.28ರ ಬೆಳಗ್ಗೆ 6ರಿಂದ ಮಾ.30ರ ಬೆಳಗ್ಗೆ 6ರವರೆಗೆ ಮುಷ್ಕರ ನಡೆಯಲಿದೆ. ಬಿಎಂಎಸ್ ಹೊರತುಪಡಿಸಿ ಸುಮಾರು 20 ಸಂಘಗಳು ಮುಷ್ಕರ ನಡೆಸಲಿವೆ.
ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆ, ಅಗತ್ಯ ರಕ್ಷಣಾ ಸೇವೆಗಳ ಕಾಯ್ದೆ ಹಿಂಪಡೆಯಲು ಮತ್ತು ರೈತರ ಆರು ಬೇಡಿಕೆಗಳನ್ನು ಅಂಗೀಕರಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು 48 ಗಂಟೆಗಳ ಮುಷ್ಕರಕ್ಕೆ ಕರೆ ನೀಡಿವೆ.
ಮುಷ್ಕರದಲ್ಲಿ ರೈತ ಸಂಘಗಳು, ಬ್ಯಾಂಕ್‍ಗಳು, ಕೇಂದ್ರ ಮತ್ತು ರಾಜ್ಯ ಸೇವಾ ಸಂಸ್ಥೆಗಳು, ಶಿಕ್ಷಕರ ಸಂಘಗಳು, ಎಲ್‍ಐಸಿ, ಬಿಎಸ್‍ಎನ್‍ಎಲ್ ಮತ್ತು ಬಂದರು ನೌಕರರ ಸಂಘಟನೆಗಳು ಭಾಗವಹಿಸಲಿವೆ. ಬ್ಯಾಂಕಿಂಗ್ ವಲಯದ ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸುತ್ತಿರುವುದರಿಂದ ಬ್ಯಾಂಕ್‍ಗಳು ಕಾರ್ಯನಿರ್ವಹಿಸುವ ಸಾಧ್ಯತೆ ಕಡಿಮೆ. ಪ್ರಯಾಣವನ್ನು ಮಾಡದಿರುವುದು ಉತ್ತಮ ಮತ್ತು ಅಂಗಡಿಗಳನ್ನು ಮುಚ್ಚಬೇಕು ಎಂದು ಕಾರ್ಮಿಕ ಸಂಘಟನೆಗಳು ಒತ್ತಾಯಿಸಿವೆ.
ಒಕ್ಕೂಟಗಳು ಕೇಂದ್ರ ಕಾರ್ಮಿಕ ಸಚಿವರಿಗೆ 12 ಬೇಡಿಕೆಗಳನ್ನು ಒಳಗೊಂಡ ಬೇಡಿಕೆ ನೋಟಿಸ್ ನೀಡಿದ್ದವು. ಸಂಸತ್ತಿನಲ್ಲೂ ಈ ವಿಚಾರ ಪ್ರಸ್ತಾಪವಾಯಿತು. ಆದರೆ, ಈ ಬಗ್ಗೆ ಚರ್ಚೆ ನಡೆಸಲು ಕೇಂದ್ರ ಸಿದ್ಧಗೊಂಡಿಲ್ಲ.
ಆಸ್ಪತ್ರೆಗಳು, ಹಾಲು, ಪತ್ರಿಕೆಗಳು ಮತ್ತು ಔಷಧ ಅಂಗಡಿಗಳು ಸೇರಿದಂತೆ ಅಗತ್ಯ ಸೇವೆಗಳನ್ನು ಮುಷ್ಕರದಿಂದ ಹೊರಗಿಡಲಾಗಿದೆ. ವ್ಯಾಪಾರ-ವಹಿವಾಟು ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗಾಗಿ ಮಾರುಕಟ್ಟೆಗಳು ಸಂಪೂರ್ಣ ಬಂದ್ ಆಗಲಿವೆ.
ಸಿಐಟಿಯು, ಐಎನ್‍ಟಿಯುಸಿ, ಎಐಟಿಯುಸಿ, ಕೆಟಿಯುಸಿ, ಟಿಯುಸಿಐ, ಎಎನ್‍ಟಿಯುಐ, ಎಚ್‍ಎಂಕೆಪಿ ಸೇರಿದಂತೆ ಕಾರ್ಮಿಕ ಸಂಘಟನೆಗಳು ಮುಷ್ಕರದಲ್ಲಿ ಭಾಗವಹಿಸಲಿವೆ.