HEALTH TIPS

ಕೇರಳದಲ್ಲಿ ಇಂದು 496 ಮಂದಿಗೆ ಕೊರೊನಾ ಪತ್ತೆ: 16,883 ಮಾದರಿಗಳ ಪರೀಕ್ಷೆ

                       ತಿರುವನಂತಪುರ: ರಾಜ್ಯದಲ್ಲಿ ಇಂದು 496 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.  ಎರ್ನಾಕುಳಂ 138, ತಿರುವನಂತಪುರ 70, ಕೊಟ್ಟಾಯಂ 56, ಕೋಝಿಕ್ಕೋಡ್ 43, ಪತ್ತನಂತಿಟ್ಟ 40, ಕೊಲ್ಲಂ 29, ತ್ರಿಶೂರ್ 29, ಅಲಪ್ಪುಳ 22, ಕಣ್ಣೂರು 19, ಇಡುಕ್ಕಿ 15, ಮಲಪ್ಪುರಂ 11, ಪಾಲಕ್ಕಾಡ್ 10, ವಯನಾಡ್ 10, ಕಾಸರಗೋಡು 4 ಎಂಬಂತೆ ಕೋವಿಡ್ ಪತ್ತೆಯಾಗಿದೆ. ಕಳೆದ 24 ಗಂಟೆಗಳಲ್ಲಿ 16,883 ಮಾದರಿಗಳನ್ನು ಪರೀಕ್ಷಿಸಲಾಗಿದೆ.

                   ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 14,838 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಇವರಲ್ಲಿ 14,412 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾರೆ ಮತ್ತು 426 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 71 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ, 4051 ಕೊರೋನಾ ಪ್ರಕರಣಗಳಲ್ಲಿ, ಕೇವಲ 12 ಶೇ ಜನರು ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

               ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ ಯಾರೂ ಮೃತರಾಗಿಲ್ಲ. ಜೊತೆಗೆ, ದಾಖಲೆಗಳನ್ನು ತಡವಾಗಿ ಸ್ವೀಕರಿಸಿದ ಕಾರಣ ಹಿಂದಿನ ದಿನಗಳಲ್ಲಿ ಮೂರು ಸಾವುಗಳು ಮತ್ತು ಸುಪ್ರೀಂ ಕೋರ್ಟ್‍ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ್ದರಿಂದ 138 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 67,772ಕ್ಕೆ ಏರಿಕೆಯಾಗಿದೆ. 

               ಇಂದು ಕೋವಿಡ್ ಪತ್ತೆಯಾದವರಲ್ಲಿ 3 ಮಂದಿ ಹೊರ ರಾಜ್ಯದಿಂದ ಬಂದವರು. 462 ಮಂದಿ ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. 26 ಮಂದಿ ಜನರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು ಐವರು ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಟ್ಟಿದೆ. 

              ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 693 ಮಂದಿ ಗುಣಮುಖರಾಗಿದ್ದಾರೆ. ತಿರುವನಂತಪುರ 113, ಕೊಲ್ಲಂ 27, ಪತ್ತನಂತಿಟ್ಟ 50, ಆಲಪ್ಪುಳ 5, ಕೊಟ್ಟಾಯಂ 61, ಇಡುಕ್ಕಿ 62, ಎರ್ನಾಕುಳಂ 172, ತ್ರಿಶೂರ್ 61, ಪಾಲಕ್ಕಾಡ್ 8, ಮಲಪ್ಪುರಂ 19, ಕೋಝಿಕ್ಕೋಡ್ 58, ವಯನಾಡ್ 34, ಕಣ್ಣೂರು 21 ಮತ್ತು ಕಾಸರಗೋಡು 2 ಎಂಬಂತೆ ಗುಣ|ಮುಖರಾಗಿದ್ದಾರೆ. ಇದರೊಂದಿಗೆ 4051 ಮಂದಿಗೆ ಸೋಂಕು ತಗುಲಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 64,57,993 ಮಂದಿ ಜನರು ಕೊರೋನಾದಿಂದ ಮುಕ್ತರಾಗಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries