HEALTH TIPS

ರಷ್ಯಾ ದಾಳಿಯಿಂದ 5 ಲಕ್ಷಕ್ಕೂ ಹೆಚ್ಚು ಮಂದಿ ಉಕ್ರೇನ್ ತೊರೆದಿದ್ದಾರೆ: ವಿಶ್ವಸಂಸ್ಥೆ

     ವಿಶ್ವಸಂಸ್ಥೆ: ರಷ್ಯಾ ದಾಳಿಯಿಂದ 5 ಲಕ್ಷಕ್ಕೂ ಹೆಚ್ಚು ಮಂದಿ ಉಕ್ರೇನ್ ತೊರೆದಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಸತತ 6 ನೇ ದಿನವೂ ರಷ್ಯಾ ಉಕ್ರೇನ್ ಮೇಲೆ ದಾಳಿ ಮುಂದುವರೆಸಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. 

     ಕಳೆದ ವಾರ ರಷ್ಯಾ ದಾಳಿ ಪ್ರಾರಂಭಿಸಿದಾಗಿನಿಂದ ಈ ವರೆಗೂ ಉಕ್ರೇನ್ ನಲ್ಲಿ ಆಂತರಿಕವಾಗಿ 1,60,000 ಮಂದಿ ಸ್ಥಳಾಂತರಗೊಂಡಿದ್ದು ವಸತಿ ರಹಿತರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳು ಮತ್ತು ತುರ್ತು ಪರಿಹಾರ ಸಂಯೋಜಕರಾದ ಮಾರ್ಟಿನ್ ಗ್ರಿಫಿತ್ಸ್ ಮಾಹಿತಿ ನೀಡಿದ್ದಾರೆ. 

     ವಿಶ್ವಸಂಸ್ಥೆ ನಿರಾಶ್ರಿತ ಏಜೆನ್ಸಿಯ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಅರ್ಧ ಮಿಲಿಯನ್ ಮಂದಿಗಿಂತಲೂ ಹೆಚ್ಚಿನ ಜನ ಉಕ್ರೇನ್ ನ ಅಂತಾರಾಷ್ಟ್ರೀಯ ಗಡಿಗಳನ್ನು ತೊರೆದು ಪೋಲ್ಯಾಂಡ್ ನತ್ತ ಧಾವಿಸಿದ್ದಾರೆ. ಪ್ರತಿ ಗಂಟೆಗೂ ಈ ಅಂಕಿ-ಸಂಖ್ಯೆಗಳು ಬದಲಾವಣೆಯಾಗುತ್ತಿರುತ್ತದೆ ಎಂದು ಗ್ರಿಫಿತ್ಸ್ ಹೇಳಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries