ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು 500 ಮಹಿಳಾ ಸನ್ಯಾಸಿನಿಯರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕಛ್ನ ಧೋರ್ಡೊ ಎಂಬಲ್ಲಿನ ಮಹಿಳಾ ಸನ್ಯಾಸಿನಿಯರ ಕ್ಯಾಂಪ್ ಆ ಮಾತುಗಳಿಗೆ ವೇದಿಕೆ ಆಗಲಿದೆ.

ಮಹಿಳಾ ಸಬಲೀಕರಣದಲ್ಲಿ ಹಾಗೂ ಸಮಾಜದಲ್ಲಿ ಮಹಿಳಾ ಸನ್ಯಾಸಿನಿಯರ ಪಾತ್ರ ಎಂಬ ವಿಷಯದಲ್ಲಿ ಅಲ್ಲಿ ವಿಚಾರಸಂಕಿರಣ ನಡೆಯಲಿದ್ದು, ಅದರಲ್ಲಿ ಸುಮಾರು 500 ಮಹಿಳಾ ಸನ್ಯಾಸಿನಿಯರು ಭಾಗವಹಿಸಲಿದ್ದಾರೆ.
ಸಂಸ್ಕೃತಿ, ಧರ್ಮ, ಸ್ತ್ರೀ ಸುಧಾರಣೆ, ಭದ್ರತೆ, ಸಾಮಾಜಿಕ ಸ್ಥಾನಮಾನ ಹಾಗೂ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರ ಪಾತ್ರದ ಬಗ್ಗೆಯೂ ಆ ವಿಚಾರಸಂಕಿರಣದಲ್ಲಿ ವಿಷಯ ಮಂಡನೆ ಆಗಲಿದೆ. ಅಲ್ಲದೆ ಮಹಿಳೆಯರ ಸಾಧನೆ, ಮಹಿಳೆಯರಿಗಾಗಿ ಕೇಂದ್ರ ಹಾಗೂ ರಾಜ್ಯಗಳಲ್ಲಿ ಇರುವ ಸರ್ಕಾರಿ ಯೋಜನೆಗಳ ಕುರಿತು ಕೂಡ ಚರ್ಚೆ ಆಗಲಿದೆ. ಆ ವಿಚಾರಸಂಕಿರಣದಲ್ಲಿ ನಾಳೆ ಮೋದಿ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಲಿದ್ದಾರೆ.