ನವದೆಹಲಿ: ಪ್ರತಿಪಕ್ಷಗಳು ಮತ್ತು ಆಡಳಿತಾರೂಢ ರಾಜಕೀಯ ಪಕ್ಷಗಳು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುತ್ತಿರುವ ಈ ಸಮಯದಲ್ಲಿ, 100 ಕ್ಕೂ ಹೆಚ್ಚು ಬ್ಯಾಂಕ್ ವಂಚನೆ ಮತ್ತು 50,000 ಕೋಟಿ ರೂ. ಮೊತ್ತದ ದುರುಪಯೋಗ ಪ್ರಕರಣಗಳ ಸಿಬಿಐ ತನಿಖೆಗೆ ದೇಶದಲ್ಲಿನ ರಾಜ್ಯ ಸರ್ಕಾರದಿಂದ ಒಪ್ಪಿಗೆಗಾಗಿ ಕಾಯುತ್ತಿವೆ.
ಶೂನ್ಯ ವೇಳೆಯಲ್ಲಿ ಬಿಜೆಪಿ ರಾಜ್ಯಸಭಾ ಸದಸ್ಯ ಸುಶೀಲ್ ಕುಮಾರ್ ಶಿಂಧೆ ಕೇಳಿದ ಪ್ರಶ್ನೆಗೆ ಕೇಂದ್ರ ಸರ್ಕಾರ ಈ ಮಾಹಿತಿ ನೀಡಿದೆ. ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಸೇರಿದಂತೆ ದೇಶದಲ್ಲಿನ 9 ರಾಜ್ಯಗಳು ಬ್ಯಾಂಕ್ ವಂಚನೆ ಮತ್ತಿತರ ಪ್ರಕರಣಗಳ ಸಿಬಿಐ ತನಿಖೆಗೆ ಒಪ್ಪಿಗೆಯನ್ನು ಹಿಂಪಡೆದುಕೊಂಡಿವೆ.
ರೂ. 1,107 ಕೋಟಿ ವಂಚನೆಯ ಪಂಜಾಬ್ ರಾಷ್ಟ್ರೀಯ ಬ್ಯಾಂಕ್ ಮತ್ತು ರೂ. 739 ಕೋಟಿ ಬರೋಡ್ ಬ್ಯಾಂಕ್ ವಂಚನೆ ಸೇರಿದಂತೆ ಎಲ್ಲಾ 100 ಬ್ಯಾಂಕ್ ವಂಚನೆ ಕೇಸುಗಳು ತನಿಖೆಗಾಗಿ ಬಾಕಿಯಿದೆ. ಇವರೆಡೂ ಪ್ರಕರಣಗಳು ಮಹಾರಾಷ್ಟ್ರ ರಾಜ್ಯ ಒಂದರಿಂದಲೇ ವರದಿಯಾಗಿದೆ. ಈ ರೀತಿಯ ಬ್ಯಾಂಕ್ ವಂಚನೆ ಪ್ರಕರಣಗಳ ತನಿಖೆಗಾಗಿ ಮಹಾರಾಷ್ಟ್ರ ಸರ್ಕಾರದ ಅನುಮೋದನೆಗಾಗಿ ಸಿಬಿಐ ಕಾಯುತ್ತಿದೆ ಎಂದು ಸುಶೀಲ್ ಕುಮಾರ್ ಮೋದಿಗೆ ಸರ್ಕಾರ ಮಾಹಿತಿ ನೀಡಿದೆ.
ದೇಶಾದ್ಯಂತ 50, 000 ಕೋಟಿ ರೂ. ಮೊತ್ತದ ಕೇಸ್ ಗಳ ತನಿಖೆಯನ್ನು ವಿಳಂಬವಿಲ್ಲದೆ ಸಿಬಿಐ ತನಿಖೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿರುವುದಾಗಿ ಅವರು ಹೇಳಿದ್ದಾರೆ. ರಾಜ್ಯ ಸಂಬಂಧಿತ ಬ್ಯಾಂಕ್ ಗಳಿಗೆ ವಂಚನೆ ಮತ್ತಿತರ ಹಣಕಾಸು ವಂಚನೆ ಪ್ರಕರಣಗಳಲ್ಲಿ ಸಿಬಿಐ ತನಿಖೆಗೆ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಪಂಜಾಬ್, ರಾಜಸ್ಥಾನ, ಕೇರಳ, ಮಿಜೋರಾಂ, ಜಾರ್ಖಂಡ್, ಛತ್ತೀಸ್ ಗಢ ಮತ್ತು ಮೇಘಾಲಯ ಅನುಮತಿ ನೀಡಿಲ್ಲ.