ಕೊಲ್ಲಂ: ಮಾಜಿ ಶಾಸಕರ ಪುತ್ರಿಯೊಬ್ಬರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಪತಿ ಹಾಗೂ ಕುಟುಂಬದ ಸದಸ್ಯರ ವಿರುದ್ಧ ಪ್ರಕರಣ ದಾಖಲಾಗಿದೆ. ಚವರದ ದಿವಂಗತ ಶಾಸಕ ಎನ್ ವಿಜಯನ್ ಪಿಳ್ಳೈ ಅವರ ಪುತ್ರಿ ಲಕ್ಷ್ಮಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಆರೋಪಿಗಳು ವಿವಾಹದ ವೇಳೆ ನೀಡಿದ್ದ 500 ಪವನ್ ಚಿನ್ನಾಭರಣಗಳನ್ನು ಲಪಟಾಯಿಸಿದ್ದು, ಈಗಾಗಲೇ ವರದಕ್ಷಿಣೆ ಹೆಸರಿನಲ್ಲಿ ಸುಮಾರು 3 ಕೋಟಿ ರೂ.ಗಳನ್ನು ಪಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಲಕ್ಷ್ಮೀ ಅವರ ಪತಿಯ ತಂದೆ ರಾಧಾಕೃಷ್ಣನ್, ಅವರ ಅಳಿಯ ಜಯಕೃಷ್ಣನ್, ತಾಯಿ ಎಸ್ ಅಂಬಿಕಾ ದೇವಿ ಮತ್ತು ಸಹೋದರ ಜ್ಯೋತಿ ಕೃಷ್ಣನ್ ವಿರುದ್ಧ ಪ್ರಕರಣ ದಾಖಲಾಗಿದೆ.