ತ್ರಿಶೂರ್: ಶಾಸ್ತ್ರೀಯ ರಂಗಭೂಮಿಯ ಬೆಳವಣಿಗೆ ಮತ್ತು ಪ್ರತಿಭಾವಂತ ಉಣ್ಣೈ ವಾರಿಯರ್ ಅವರ ಸ್ಮರಣೆಗಾಗಿ ನಿರ್ಮಿಸಲಾಗಿರುವ ಇರಿಂಞಲಕುಡ 'ಉನ್ನೈ ವಾರಿಯರ್ ಸ್ಮಾರಕ ಕಲಾನಿಲಯಂ'ಗೆ 50 ಲಕ್ಷ ರೂ. ಬಿಡುಗಡೆಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು ಮಾಹಿತಿ ನೀಡಿದರು.
ಕಥಕ್ಕಳಿ ಪ್ರಚಾರ ಮತ್ತು ಪ್ರಸಾರಕ್ಕೆ ಡಿಸೆಂಬರ್ 7, 1955 ರಂದು ಪ್ರಾರಂಭವಾದ ಸಂಸ್ಥೆಯನ್ನು ಯೋಜನೇತರ ವರ್ಗ ಎಂದು ವರ್ಗೀಕರಿಸಿ ಹೆಚ್ಚುವರಿ ಧನಸಹಾಯವನ್ನು ನೀಡಲಾಗುವುದು. ಕಲಾನಿಲಯದ ಬೆಳವಣಿಗೆಗೆ ಸರ್ಕಾರ ಬದ್ಧವಾಗಿದೆ ಎಂದು ಸಚಿವೆ ಬಿಂದು ಹೇಳಿದರು. ಕಥಕ್ಕಳಿ ತರಬೇತಿಯ ಜೊತೆಗೆ ಪದವಿಪೂರ್ವ ಕೋರ್ಸ್‍ಗಳನ್ನು ನೀಡುತ್ತಿದೆ.
ಕಲಾನಿಲಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸರ್ಕಾರ ಪ್ರಯತ್ನಿಸುತ್ತಿದ್ದು, ಕಥಕ್ಕಳಿಯನ್ನು ಪೆÇ್ರೀತ್ಸಾಹಿಸುವ ಉದ್ದೇಶದಿಂದ ಮನರಂಜನಾ ಸಾಧನಗಳು ಮತ್ತು ಸಾಂಸ್ಕøತಿಕ ಪ್ರವಾಸೋದ್ಯಮಕ್ಕೆ ವೇದಿಕೆ ಕಲ್ಪಿಸುವ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಸಚಿವರು ಹೇಳಿದರು. ಎಲ್ಲಾ ಭಾರತೀಯ ನೃತ್ಯ ಪ್ರಕಾರಗಳಲ್ಲಿ ತರಬೇತಿ ಮತ್ತು ಹೊಸ ಸೌಂದರ್ಯದ ಉದ್ಯಮಗಳನ್ನು ಪ್ರಾರಂಭಿಸುವ ಕಲಾನಿಲಯದ ಕನಸುಗಳೊಂದಿಗೆ ಸರ್ಕಾರವಿದೆ ಎಂದು ಅವರು ಹೇಳಿದರು.