ನವದೆಹಲಿ: ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಎರಡನೇ ಸಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಈ ಮೂಲಕ ದೇಶದಲ್ಲಿ 'ಅಂಡರ್ 50 ಸಿಎಂ' ಅಂದರೆ 50 ವರ್ಷದೊಳಗಿನ ಮುಖ್ಯಮಂತ್ರಿಗಳ ಪ್ರಮಾಣ ಐದಕ್ಕೆ ತಲುಪಿದೆ.
ನವದೆಹಲಿ: ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಎರಡನೇ ಸಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಈ ಮೂಲಕ ದೇಶದಲ್ಲಿ 'ಅಂಡರ್ 50 ಸಿಎಂ' ಅಂದರೆ 50 ವರ್ಷದೊಳಗಿನ ಮುಖ್ಯಮಂತ್ರಿಗಳ ಪ್ರಮಾಣ ಐದಕ್ಕೆ ತಲುಪಿದೆ.
ಈ ತಿಂಗಳಲ್ಲಿ ಪಂಜಾಬ್ ಮುಖ್ಯಮಂತ್ರಿಯಾಗಿ 48ರ ವಯಸ್ಸಿನ ಭಗವಂತ್ ಮಾನ್ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ 49ರ ವಯಸ್ಸಿನ ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಒಟ್ಟು ಐವರು 'ಅಂಡರ್ 50' ಸಿಎಂ ಎನಿಸಿಕೊಂಡಿದ್ದಾರೆ.
ಸದ್ಯ ಇರುವ ಅಂಡರ್ 50 ಮುಖ್ಯಮಂತ್ರಿಗಳ ಪೈಕಿ ಬಿಜೆಪಿಯವರೇ ಅಧಿಕ. ಬಿಜೆಪಿಯ ನಾಲ್ವರು ಹಾಗೂ ವೈಎಸ್ಆರ್ನ ಒಬ್ಬರು ಅಂಡರ್ 50 ಸಿಎಂ ವರ್ಗಕ್ಕೆ ಸೇರುತ್ತಾರೆ. 2019ರಲ್ಲಿ ಜಗನ್ಮೋಹನ್ ರೆಡ್ಡಿ ತಮ್ಮ 46ನೇ ವಯಸ್ಸಿನಲ್ಲಿ ಮುಖ್ಯಮಂತ್ರಿಯಾದರು. ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪ್ರೇಮ ಖಂಡು (42), ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ (48) ಮತ್ತು ಉತ್ತರಾಖಂಡದ ಪುಷ್ಕರ್ ಸಿಂಗ್ ಧಾಮಿ (46) ಕೂಡ ಅಂಡರ್ 50 ಅಡಿ ಬರುತ್ತಾರೆ.