ತಿರುವನಂತಪುರ: ರಾಜ್ಯದಲ್ಲಿ ಇಂದು 543 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಎರ್ನಾಕುಳ|ಂ 109, ಕೊಟ್ಟಾಯಂ 78, ತಿರುವನಂತಪುರ 60, ತ್ರಿಶೂರ್ 58, ಕೋಝಿಕ್ಕೋಡ್ 45, ಪತ್ತನಂತಿಟ್ಟ 43, ಕೊಲ್ಲಂ 25, ಇಡುಕ್ಕಿ 24, ಕಣ್ಣೂರು 22, ಮಲಪ್ಪುರಂ 21, ಪಾಲಕ್ಕಾಡು 28, ಪಾಲಕ್ಕಾಡ್ 20, ಆಲಪ್ಪುಳ 18, ವಯನಾಡ್ 18ಕಾಸರಗೋಡು 2 ಎಂಬಂತೆ ಕೋವಿಡ್ ಪತ್ತೆಯಾಗಿದೆ. ಕಳೆದ 24 ಗಂಟೆಗಳಲ್ಲಿ 17,804 ಮಾದರಿಗಳನ್ನು ಪರೀಕ್ಷಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 15,298 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಇವರಲ್ಲಿ 14,838 ಮಂದಿ ಮನೆ/ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದಾರೆ ಮತ್ತು 460 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. 4389 ಕೊರೋನಾ ಪ್ರಕರಣಗಳಲ್ಲಿ, ಕೇವಲ 10 ಪ್ರತಿಶತವನ್ನು ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಯಾವುದೇ ಕೊರೊನಾ ಸಾವು ಪತ್ತೆಯಾಗಿಲ್ಲ. ಇದಲ್ಲದೆ, ಹಿಂದಿನ ದಿನಗಳಲ್ಲಿ ದಾಖಲೆಗಳ ಸ್ವೀಕೃತಿಯ ವಿಳಂಬದಿಂದ ಎರಡು ಸಾವುಗಳು ಮತ್ತು ಸುಪ್ರೀಂ ಕೋರ್ಟ್ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ್ದರಿಂದ 79 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 67,631ಕ್ಕೆ ಏರಿಕೆಯಾಗಿದೆ.
ಇಂದು ದೃಢಪಟ್ಟಿರುವ 3 ಪ್ರಕರಣಗಳು ಹೊರ ರಾಜ್ಯದಿಂದ ಬಂದವರು. ಸಂಪರ್ಕದಿಂದ 507 ಮಂದಿ ಜನರಿಗೆ ಸೋಂಕು ತಗುಲಿದೆ. 27 ಮಂದಿ ಜನರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು ಆರು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಪತ್ತೆಹಚ್ಚಲಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 872 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 123, ಕೊಲ್ಲಂ 61, ಪತ್ತನಂತಿಟ್ಟ 59, ಆಲಪ್ಪುಳ 4, ಕೊಟ್ಟಾಯಂ 171, ಇಡುಕ್ಕಿ 59, ಎರ್ನಾಕುಳಂ 171, ತ್ರಿಶೂರ್ 48, ಪಾಲಕ್ಕಾಡ್ 5, ಮಲಪ್ಪುರಂ 30, ಕೋಝಿಕ್ಕೋಡ್ 67, ವಯನಾಡ್ 26, ಕಣ್ಣೂರು 44 ಮತ್ತು ಕಾಸರಗೋಡು 4 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 4389 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 64,57,300 ಮಂದಿ ಜನರು ಕೊರೋನಾದಿಂದ ಮುಕ್ತರಾಗಿದ್ದಾರೆ.