ಅಲ್ಲದೆ ಈ ಹಿಂದೆ ಅಮೆರಿಕ ಮತ್ತು ಜಪಾನ್ ನಾಗರಿಕರಿಗೆ ನೀಡಲಾಗಿದ್ದ 10 ವರ್ಷಗಳ ಅವಧಿಯ ಟೂರಿಸ್ಟ್ ವೀಸಾವನ್ನು ಮರುಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟೂರಿಸ್ಟ್ ಮತ್ತು ಇ-ಟೂರಿಸ್ಟ್ ವೀಸಾ ಹೊಂದಿದ ವಿದೇಶಿಯರು ಭಾರತ ದೇಶವನ್ನು ನಿರ್ದಿಷ್ಟ Sea Immigration ಚೆಕ್ ಪೋಸ್ಟ್ ಅಥವಾ ವಿಮಾನ ನಿಲ್ದಾಣದ Immigration ಚೆಕಿಂಗ್ ಗೆ ಒಳಗಾದ ನಂತರವೇ ಪ್ರವೇಶಿಸಬಹುದಾಗಿದೆ. ಭೂಗಡಿ ಅಥವಾ ನದಿ ಮುಖಾಂತರ ವಿದೇಶಿಯರು ಭಾರತವನ್ನು ಪ್ರವೇಶಿಸುವಂತಿಲ್ಲ.