ಮಲಪ್ಪುರಂ: ಮಲಪ್ಪುರಂನ ಮಂಬಾಟ್‍ನ ಎಂಇಎಸ್ ಕಾಲೇಜು ಬಳಿ ಸ್ಥಾಪಿಸಲಾದ ಪ್ಲೆಕ್ಸ್ ಭಾರೀ ಸುದ್ದಿಗೆ ಗ್ರಾಸವಾಗಿದೆ. ನಗರ ಸಭೆಯ ಪರವಾಗಿ ಹಾಕಲಾದ ಫ್ಲೆಕ್ಸ್ ನಲ್ಲಿ ಕಾಲೇಜು ಅವಧಿಯ ನಂತರ ಈ ಪ್ರದೇಶದಲ್ಲಿ ವಿದ್ಯಾರ್ಥಿಗಳಾದ ಹುಡುಗರು ಮತ್ತು ಹುಡುಗಿಯರು ಕಂಡುಬರಬಾರದು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಬರೆಯಲಾಗಿದೆ.
ಕಾಲೇಜು ತರಗತಿಗಳು ಮುಗಿದ ಬಳಿಕ, ಸಂಜೆ 5ರ ನಂತರವೂ ವಿದ್ಯಾರ್ಥಿಗಳು ಅಡ್ಡಾಡುತ್ತಿರುವುದು ವ್ಯಾಪಕಗೊಂಡಿದೆ. ಇದರಿಂದ ಈ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳಿಗೆ ಹಲವು ರೀತಯಲ್ಲಿ ತೊಂದರೆಗೆ ಕಾರಣವಾಗಿದೆ. ಹಲವು ಬಾರಿ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆಗಳೂ ಉಂಟಾಗುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳ ಗದ್ದಲಗಳಿಂದ ಕಿರಿಕಿರಿ, ಕಿರುಕುಳ ಮತ್ತು ಮದ್ಯಪಾನ ಸಹಿತ ಅಮಲು ಪದಾರ್ಥ ಸೇವೆನೆಗಳೂ ವಿದ್ಯಾರ್ಥಿಗಳಲ್ಲಿ ವ್ಯಾಪಕವಾಗಿದೆ ಎಂದು ಪ್ಲೆಕ್ಸ್ ನಲ್ಲಿ ಬರೆಯಲಾಗಿದೆ.
ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆದ ನಂತರ ಪೋಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಫ್ಲೆಕ್ಸ್ ಹಾಕಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ನಂತರ ಫ್ಲೆಕ್ಸ್ ನ ಸಮಯವನ್ನು ಐದರಿಂದ ಆರು ಗಂಟೆಗಳವರೆಗೆ ಪರಿಷ್ಕರಿಸಲಾಗಿದೆ. ಫ್ಲೆಕ್ಸ್ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ಸಂಜೆ 5 ಗಂಟೆಯ ನಂತರ ಕ್ಯಾಂಪಸ್‍ನಲ್ಲಿ ವಿದ್ಯಾರ್ಥಿಗಳು ಕಂಡುಬಂದರೆ ತಕ್ಕ ಪಾಠ ಕಲಿಸಲಾಗುವುದು ಎಂಬ ಹೇಳಿಕೆ ಇದ್ದು ಇದು ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬ ಟೀಕೆಯೂ ಕೇಳಿಬಂದಿದೆ.