HEALTH TIPS

'ಆತ್ಮನಿರ್ಭರ್' ಉತ್ತೇಜನ: ದೇಶೀಯ ಮೂಲದಿಂದ 5 ಲಕ್ಷ ಕೋಟಿ ರೂ. ಮೌಲ್ಯದ ಮಿಲಿಟರಿ ಉಪಕರಣ ಖರೀದಿಗೆ ಕೇಂದ್ರ ಚಿಂತನೆ

          ನವದೆಹಲಿ: ಸ್ವದೇಶಿ ರಕ್ಷಣಾ ಉತ್ಪಾದನೆ ಉತ್ತೇಜನ ನೀತಿಗನುಗುಣವಾಗಿ ಮುಂದಿನ ಐದರಿಂದ ಏಳು ವರ್ಷಗಳಲ್ಲಿ ದೇಶೀಯ ಉದ್ಯಮಗಳಿಂದ 5 ಲಕ್ಷ ಕೋಟಿ ರೂ. ಮೌಲ್ಯದ ಮಿಲಿಟರಿ ಉಪಕರಣ  ಖರೀದಿಸಲು ಯೋಜಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಸೋಮವಾರ ಹೇಳಿದೆ.

             ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಕ್ಷಣಾ ಖಾತೆಯ ರಾಜ್ಯ ಸಚಿವ ಅಜಯ್ ಭಟ್ ,  ದೇಶೀಯ ಮೂಲಗಳಿಂದ ಖರೀದಿಸಲಾಗುವ ಮಿಲಿಟರಿ ಉಪಕರಣಗಳ ಯೋಜಿತ ಅಂಕಿಅಂಶವನ್ನು ತಿಳಿಸಿದರು. 

                ಭಾರತವು  2024 ರ ವೇಳೆಗೆ  101 ಶಸ್ತ್ರಾಸ್ತ್ರಗಳು ಮತ್ತು ಸಾರಿಗೆ ವಿಮಾನಗಳು, ಲಘು ಯುದ್ಧ ಹೆಲಿಕಾಪ್ಟರ್‌ಗಳು, ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಸೋನಾರ್ ಸಿಸ್ಟಮ್‌ಗಳಂತಹ ಮಿಲಿಟರಿ ಉಪಕರಣಗಳ ಆಮದನ್ನು ನಿಲ್ಲಿಸಲಿದೆ ಎಂದು ಆಗಸ್ಟ್ 2020ರಲ್ಲಿ ರಕ್ಷಣಾ ಸಚಿವಾಲಯ ಘೋಷಿತ್ತು. 

             108 ಮಿಲಿಟರಿ ಶಸ್ತ್ರಾಸ್ತ್ರಗಳು ಮತ್ತು ಮುಂದಿನ ಪೀಳಿಗೆಯ ಕಾರ್ವೆಟ್‌ಗಳು, ವಾಯುಗಾಮಿ ಮುಂಚಿನ ಎಚ್ಚರಿಕೆ ವ್ಯವಸ್ಥೆಗಳು, ಟ್ಯಾಂಕ್ ಇಂಜಿನ್‌ಗಳು ಮತ್ತು ರಾಡಾರ್‌ಗಳಂತಹ ರಕ್ಷಣಾ ವ್ಯವಸ್ಥೆಗಳ ಮೇಲಿನ ಆಮದು ನಿರ್ಬಂಧ ಹೇರುವ ಎರಡನೇ ಪಟ್ಟಿಯನ್ನು ಕಳೆದ ವರ್ಷ ಮೇ ತಿಂಗಳಲ್ಲಿ ನೀಡಲಾಯಿತು.

               ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ 2,500 ವಸ್ತುಗಳನ್ನು ಒಳಗೊಂಡಿರುವ ಪಟ್ಟಿಯನ್ನು ಡಿಸೆಂಬರ್‌ನಲ್ಲಿ  ಸಚಿವಾಲಯ ಬಿಡುಗಡೆ ಮಾಡಿತ್ತು.  ಡಿಸೆಂಬರ್ 2024 ರ ವೇಳೆಗೆ ದೇಶದೊಳಗೆ ಅಭಿವೃದ್ಧಿಪಡಿಸಲಾಗುವ 351 ಸಲಕರಣೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಂತಹ ಸಲಕರಣಗಳ ಪಟ್ಟಿ ಮತ್ತು ಸರ್ಕಾರದ ಆದ್ಯತೆಗಳನ್ನು ಸಚಿವರು ಪ್ರಸ್ತಾಪಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries