HEALTH TIPS

ಈ ವರ್ಷಾಂತ್ಯದಲ್ಲೇ 5ಜಿ ಸೇವೆ: ಕೇಂದ್ರ ಮಾಹಿತಿ

            ನವದೆಹಲಿ: ದೇಶದಲ್ಲಿ ಈ ವರ್ಷದ ಅಂತ್ಯದ ವೇಳೆಗೆ 5ಜಿ ಸೇವೆ ದೊರೆಯಲಿದೆ. ಶೀಘ್ರದಲ್ಲೇ ತರಂಗಾಂತರ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಕೇಂದ್ರ ಸಚಿವ ದೇವುಸಿನ್ಹ ಚೌಹಾಣ್ ಶುಕ್ರವಾರ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದರು.

              ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ನಾಲ್ಕು ಕಂಪನಿಗಳಿಗೆ ಪ್ರಯೋಗಾರ್ಥವಾಗಿ ತರಂಗಾಂತರ ನೀಡಲಾಗಿದೆ.

ಪ್ರಯೋಗವು ಶೀಘ್ರದಲ್ಲೇ ಅಂತಿಮಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.

            ಮುಂಬರುವ ಹರಾಜು ಪ್ರಕ್ರಿಯೆಗೆ ಶಿಫಾರಸುಗಳನ್ನು ಮಾಡುವಂತೆ ಭಾರತೀಯ ದೂರಸಂಪರ್ಕ ಪ್ರಾಧಿಕಾರವನ್ನು (ಟ್ರಾಯ್‌) ಕೋರಲಾಗಿದೆ ಎಂದೂ ಅವರು ಹೇಳಿದರು.

'ಸದ್ಯದಲ್ಲೇ ಹರಾಜು ಪ್ರಕ್ರಿಯೆ ನಡೆಸಲಿದ್ದೇವೆ. ವರ್ಷಾಂತ್ಯದ ವೇಳೆಗೆ ದೇಶದಲ್ಲಿ 5ಜಿ ಸೇವೆ ಲಭ್ಯವಾಗಲಿದೆ. ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಈ ವರ್ಷ 4ಜಿ ಸೇವೆ ಆರಂಭಿಸಲಿದೆ' ಎಂದು ಅವರು ಮಾಹಿತಿ ನೀಡಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries