ನವದೆಹಲಿ: ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಈ ಬೇಸಿಗೆಯಲ್ಲಿ ವಿಮಾನ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಈ ಬೇಸಿಗೆಯಲ್ಲಿ 60 ಹೊಸ ದೇಶೀಯ ವಿಮಾನಗಳನ್ನು ಪ್ರಾರಂಭಿಸುವುದಾಗಿ ಸ್ಪೈಸ್ ಜೆಟ್ ಘೋಷಿಸಿದೆ.
ವೇಳಾಪಟ್ಟಿ ಪ್ರಕಾರ ೬೦ ಹೊಸ ದೇಶೀಯ ವಿಮಾನಗಳು ಮಾರ್ಚ್ 27 ರಿಂದ ಪ್ರಾರಂಭವಾಗುತ್ತದೆ ಮತ್ತು ಅಕ್ಟೋಬರ್ 29 ರಂದು ಕೊನೆಗೊಳ್ಳುತ್ತದೆ.
ಏರ್‌ಲೈನ್ಸ್ ಬೇಸಿಗೆಯ ವೇಳಾಪಟ್ಟಿ ಪ್ರಕಾರ, ಮೊದಲ ವಿಮಾನಗಳು ಗೋರಖ್ ಪುರ-ಕಾನ್ಪುರ, ಗೋರಖ್ ಪುರ ವಾರಣಾಸಿ, ಜೈಪುರ-ಧರ್ಮಶಾಲಾ ಮತ್ತು ತಿರುಪತಿ-ಶಿರಡಿ ವಲಯಗಳಲ್ಲಿ ಹಾರಾಟ ಪ್ರಾರಂಭಿಸಲಿದೆ ಎಂದು ಹೇಳಿದೆ.
“ಏರ್‌ಲೈನ್ಸ್ ತನ್ನ ವೇಳಾಪಟ್ಟಿಗೆ 60 ಹೊಸ ದೇಶೀಯ ವಿಮಾನಗಳನ್ನು ಸೇರಿಸಿದೆ, ಇದರಲ್ಲಿ ಏಳು ಉಡಾನ್ (Uಆಂಓ) ವಿಮಾನಗಳು, ಎಂಟು ಇಂಡಸ್ಟ್ರಿ ಫಸ್ಟ್ ವಿಮಾನಗಳು, ಹೊಸ ಸಂಪರ್ಕಗಳು ಮತ್ತು ಹೆಚ್ಚುವರಿ ಆವರ್ತನಗಳು ಸೇರಿವೆ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಉಡಾನ್ ಯೋಜನೆಯಡಿಯಲ್ಲಿ, ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ವಿಮಾನ ನಿಲ್ದಾಣ ನಿರ್ವಾಹಕರಿಂದ ಆರ್ಥಿಕ ಪ್ರೋತ್ಸಾಹವನ್ನು ಆಯ್ದ ವಿಮಾನಯಾನ ಸಂಸ್ಥೆಗಳಿಗೆ ವಿಸ್ತರಿಸಲಾಗಿದೆ ಮತ್ತು ಸೇವೆಯನ್ನು ಹೊಂದಿರದ ಮತ್ತು ಕಡಿಮೆ ಸೇವೆಯನ್ನು ಹೊಂದಿರುವ ವಿಮಾನ ನಿಲ್ದಾಣಗಳಿಂದ ಕಾರ್ಯಾಚರಣೆಯನ್ನು ಉತ್ತೇಜಿಸಲು ಮತ್ತು ವಿಮಾನ ದರಗಳನ್ನು ಕೈಗೆಟುಕುವಂತೆ ಇರಿಸುತ್ತದೆ.