ನವದೆಹಲಿ: ಹಿರಿಯ ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ಇಂದು 66ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಪ್ರಯುಕ್ತ ಅವರಿಗೆ ಶುಭಾಶಯ ತಿಳಿಸಿದವರಲ್ಲಿ ಅಮಿತ್ ಶಾ ಕೂಡಾ ಒಬ್ಬರು ಎನ್ನುವುದು ಅಚ್ಚರಿಯ ಸಂಗತಿ.
ರಾಜಕೀಯ ಎದುರಾಳಿಯಾದ ಅಮಿತ್ ಶಾ ತಮಗೆ ಕರೆ ಮಾಡಿ ಶುಭಾಶಯ ತಿಳಿಸಿದ್ದು ಸರ್ ಪ್ರೈಸ್ ತಂದಿದೆ ಎಂದು ಶಶಿ ತರೂರ್ ಅವರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ತರೂರ್ ಅವರಿಗೆ ಜನ್ಮದಿನದ ಶುಭಾಶಯ ಹೇಳಿ ಮೋದಿ ಕಳಿಸಿದ್ದ ಪತ್ರವನ್ನು ತರೂರ್ ಅವರು ಟ್ವೀಟ್ ಮಾಡಿದ್ದಾರೆ.