ನವದೆಹಲಿ: ಯೂಟ್ಯೂಬ್ ವಿಡಿಯೊ ಸೃಷ್ಟಿಕರ್ತರು 2020ರಲ್ಲಿ ಭಾರತದ ಆರ್ಥಿಕತೆಗೆ 6,800 ಕೋಟಿ ರೂಪಾಯಿ ಕೊಡುಗೆ ನೀಡಿದ್ದಾರೆ ಎಂದು ಗೂಗಲ್ ಮಾಲೀಕತ್ವದ ವೇದಿಕೆ ತಿಳಿಸಿದೆ.
ನವದೆಹಲಿ: ಯೂಟ್ಯೂಬ್ ವಿಡಿಯೊ ಸೃಷ್ಟಿಕರ್ತರು 2020ರಲ್ಲಿ ಭಾರತದ ಆರ್ಥಿಕತೆಗೆ 6,800 ಕೋಟಿ ರೂಪಾಯಿ ಕೊಡುಗೆ ನೀಡಿದ್ದಾರೆ ಎಂದು ಗೂಗಲ್ ಮಾಲೀಕತ್ವದ ವೇದಿಕೆ ತಿಳಿಸಿದೆ.
ಯೂಟ್ಯೂಬ್ನ ಆರ್ಥಿಕ ಮೌಲ್ಯ ಹೆಚ್ಚಾಗುತ್ತಿದ್ದು 6.83 ಲಕ್ಷ ಪೂರ್ಣಾವಧಿಗೆ ಸಮನಾದ ಉದ್ಯೋಗಗಳನ್ನು ಅದು ಸೃಷ್ಟಿಸಿದೆ ಎಂದು ಗುರುವಾರ ಹೇಳಿದೆ. ಭಾರತದಲ್ಲಿ ಪ್ರಸ್ತುತ 40,000 ಯೂಟ್ಯೂಬ್ ಚಾನೆಲ್ಗಳಿದ್ದು ಒಂದು ಲಕ್ಷಕ್ಕೂ ಅಧಿಕ ಚಂದಾದಾರರಿದ್ದಾರೆ.