ನವದೆಹಲಿ: ಸಾರ್ವಜನಿಕರ ಸಂಚಾರ ಹಾಗೂ ಅಗತ್ಯ ವಸ್ತುಗಳ ಸಾಗಾಟಕ್ಕೆ ಬಳಸಲಾಗುವ ಡೀಸೆಲ್ ಚಾಲಿತ 'ಬಿಎಸ್-6' ಲಘು ಹಾಗೂ ಭಾರಿ ವಾಹನಗಳ ನೋಂದಣಿಗೆ ಸುಪ್ರೀಂಕೋರ್ಟ್ ಮಂಗಳವಾರ ಅನುಮತಿ ನೀಡಿತು.
ನವದೆಹಲಿ: ಸಾರ್ವಜನಿಕರ ಸಂಚಾರ ಹಾಗೂ ಅಗತ್ಯ ವಸ್ತುಗಳ ಸಾಗಾಟಕ್ಕೆ ಬಳಸಲಾಗುವ ಡೀಸೆಲ್ ಚಾಲಿತ 'ಬಿಎಸ್-6' ಲಘು ಹಾಗೂ ಭಾರಿ ವಾಹನಗಳ ನೋಂದಣಿಗೆ ಸುಪ್ರೀಂಕೋರ್ಟ್ ಮಂಗಳವಾರ ಅನುಮತಿ ನೀಡಿತು.
ಈ ಕುರಿತ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರರಾವ್ ಹಾಗೂ ಬಿ.ಆರ್.ಗವಾಯಿ ಅವರಿದ್ದ ನ್ಯಾಯಪೀಠ, 'ಈ ವರ್ಗದ ವಾಹನಗಳ ನೋಂದಣಿಗಾಗಿ ಕೋರ್ಟ್‌ನ ಆದೇಶ ಪ್ರತಿಯನ್ನು ಹಾಜರುಪಡಿಸುವಂತೆ ಅಧಿಕಾರಿಗಳು ಒತ್ತಾಯಿಸಬಾರದು' ಎಂದು ನಿರ್ದೇಶನ ನೀಡಿತು.