ಮಂಜೇಶ್ವರ: ಮೀಂಜ ಕುದ್ದುಪದವು "ಶ್ರೀಕೊರತಿವನ ಕೊರತಿಗುಳಿಗ" ದೈವಗಳ ಹರಕೆ ನೇಮೋತ್ಸವ ಮಾರ್ಚ್ 6 ಭಾನುವಾರ ಜರಗಲಿದೆ. ಬೆಳಗ್ಗೆ ಬ್ರಹ್ಮಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿವರ್ಯರ ದಿವ್ಯ ಹಸ್ತದಿಂದ ಗಣಹೋಮ ತಂಬಿಲಾದಿ ಸೇವೆಗಳು ರಾತ್ರಿ 7 ರಿಂದ ಶ್ರೀ ಕೊರತಿಗುಳಿಗ ದೈವಗಳ ಗಗ್ಗರ ಸೇವೆ ಕೆಂಡ ಸೇವೆ 9ರಿಂದ ಅನ್ನಸಂತರ್ಪಣೆ ನಂತರ ಶ್ರೀ ದೈವಗಳ ನೇಮೋತ್ಸವ ನಡೆದು ಸಿರಿಮುಡಿ ಗಂಧ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.