HEALTH TIPS

7 ದಿನಗಳಲ್ಲಿ 10 ಲಕ್ಷ ಜನರು ಉಕ್ರೇನ್‌ನಿಂದ ಪಲಾಯನ: ವಿಶ್ವಸಂಸ್ಥೆ

      ನ್ಯೂಯಾರ್ಕ್: ರಷ್ಯಾದ ಆಕ್ರಮಣದ ನಂತರ ಒಂದು ವಾರದಲ್ಲಿ  10 ಲಕ್ಷ ಜನರು ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ ತಿಳಿಸಿದೆ.  

      ಒಂದು ವಾರದೊಳಗೆ ಉಕ್ರೇನ್ ತೊರೆಯುತ್ತಿರುವ ಜನಸಂಖ್ಯೆ ಶೇಕಡಾ 2 ಕ್ಕಿಂತ ಹೆಚ್ಚಾಗಿದೆ. ಉಕ್ರೇನ್ 44 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವುದಾಗಿ 2020ರ ಅಂತ್ಯದಲ್ಲಿ ವಿಶ್ವಬ್ಯಾಂಕ್ ಲೆಕ್ಕಾಚಾರ ಮಾಡಿತ್ತು.4 ಮಿಲಿಯನ್ ಜನರು ಉಕ್ರೇನ್ ತೊರೆಯಬಹುದು ಎಂದು ವಿಶ್ವಸಂಸ್ಥೆ ಏಜೆನ್ಸಿ ಅಂದಾಜಿಸಿದೆ. ಆದರೆ. ಈ ಅಂದಾಜು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ. 

      ರಾಷ್ಟ್ರೀಯ ಅಧಿಕಾರಿಗಳು ಸಂಗ್ರಹಿಸಿದ ಲೆಕ್ಕಾಚಾದಂತೆ ಕೇಂದ್ರ ಯುರೋಪಿನಿಂದ ಮಧ್ಯರಾತ್ರಿಯಲ್ಲಿ 1 ಮಿಲಿಯನ್ ಜನರು ತೊರೆದಿರುವುದು ನಮ್ಮ ಅಂಕಿಅಂಶಗಳು ತೋರಿಸುತ್ತಿವೆ ಎಂದು ಯುಎನ್ ಹೆಚ್ ಸಿಆರ್ ವಕ್ತಾರ ಜೌಂಗ್-ಆಹ್ ಘೆಡಿನಿ-ವಿಲಿಯಮ್ಸ್ ಇ-ಮೇಲ್ ಒಂದರಲ್ಲಿ ಬರೆದುಕೊಂಡಿದ್ದಾರೆ. 

      ಕೇವಲ ಏಳು ದಿನಗಳಲ್ಲಿ ನಾವು ಉಕ್ರೇನ್‌ನಿಂದ ನೆರೆಯ ದೇಶಗಳಿಗೆ ಒಂದು ಮಿಲಿಯನ್ ನಿರಾಶ್ರಿತರು ವಲಸೆ ಹೋಗುವುದನ್ನು ನೋಡಿದ್ದೇವೆ ಎಂದು ಯುಎನ್ ಹೈ ಕಮಿಷನರ್ (ನಿರಾಶ್ರಿತರು)  ಫಿಲಿಪ್ಪೊ ಗ್ರಾಂಡಿ ಟ್ವೀಟರ್ ನಲ್ಲಿ ಹೇಳಿಕೊಂಡಿದ್ದಾರೆ. 
ಉಕ್ರೇನ್ ನಿಂದ ಪಲಾಯನವಾಗುತ್ತಿರುವವರ ಸಂಖ್ಯೆಯೂ ಈ ಶತಮಾನದಲ್ಲಿ ಬಹುದೊಡ್ಡ ನಿರಾಶ್ರಿತರ ಸಮಸ್ಯೆಯ ಮೂಲವಾಗಬಹುದೆಂದು ಯುಎನ್ ಹೆಚ್ ಸಿಆರ್ ವಕ್ತಾರ ಸಾಬಿಯಾ ಮಾಂಟೊ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries