ನವದೆಹಲಿ: ರಾಜಸ್ಥಾನದ ಪೋಖರಣ್ ಪರೀಕ್ಷಾ ವಲಯದಲ್ಲಿ ಮಾರ್ಚ್ 7ರಂದು ವಾಯುಪಡೆ ಆಯೋಜಿಸಿರುವ 'ವಾಯು ಶಕ್ತಿ ಅಭ್ಯಾಸ'ದಲ್ಲಿ 148 ಯುದ್ಧವಿಮಾನಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಲಿವೆ.
ನವದೆಹಲಿ: ರಾಜಸ್ಥಾನದ ಪೋಖರಣ್ ಪರೀಕ್ಷಾ ವಲಯದಲ್ಲಿ ಮಾರ್ಚ್ 7ರಂದು ವಾಯುಪಡೆ ಆಯೋಜಿಸಿರುವ 'ವಾಯು ಶಕ್ತಿ ಅಭ್ಯಾಸ'ದಲ್ಲಿ 148 ಯುದ್ಧವಿಮಾನಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಲಿವೆ.
ಇದೇ ಮೊದಲ ಬಾರಿಗೆ ರಫೇಲ್ ಸಹ ಈ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದೆ.
'148 ಯುದ್ಧವಿಮಾನಗಳ ಪೈಕಿ 109 ಫೈಟರ್ ಜೆಟ್‌ಗಳು ಇರಲಿವೆ. ಜಾಗ್ವಾರ್, ಸುಖೋಯ್-30, ಮಿಗ್-29 ಹಾಗೂ ತೇಜಸ್ ಸೇರಿದಂತೆ ವಿವಿಧ ಫೈಟರ್ ಜೆಟ್‌ಗಳು ಈ ಅಭ್ಯಾಸದಲ್ಲಿ ಪಾಲ್ಗೊಳ್ಳಲಿವೆ' ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
'ಆಕಾಶ್' ಹಾಗೂ 'ಸ್ಪೈಡರ್' ಕ್ಷಿಪಣಿ ವ್ಯವಸ್ಥೆಗಳ ಸಾಮರ್ಥ್ಯದ ಪ್ರಾತ್ಯಕ್ಷಿಕೆಯೂ ಇರಲಿದೆ. ಸರಕು ಸಾಗಣೆಗೆ ಬಳಸಲಾಗುವ ವಿಮಾನಗಳಾದ ಸಿ-17 ಹಾಗೂ ಸಿ-130ಜೆ ಸಹ ಈ ಸಮರಾಭ್ಯಸದಲ್ಲಿ ಪಾಲ್ಗೊಳ್ಳಲಿವೆ' ಎಂದು ತಿಳಿಸಿದ್ದಾರೆ.
ವಾಯುಪಡೆಯು ತನ್ನ ಯುದ್ಧಸನ್ನದ್ಧತೆಯ ಪ್ರದರ್ಶನಕ್ಕಾಗಿ ಮೂರು ವರ್ಷಗಳಿಗೊಮ್ಮೆ 'ವಾಯು ಶಕ್ತಿ ಅಭ್ಯಾಸ'ವನ್ನು ಆಯೋಜಿಸುತ್ತದೆ.