HEALTH TIPS

70 ವರ್ಷಗಳಲ್ಲಿ ಮಣ್ಣಿನ ಸಾವಯವ ಇಂಗಾಲ ಪ್ರಮಾಣ ಶೇ.0.3ಕ್ಕೆ ಇಳಿಕೆ

            ನಾಗಪುರ: ಕಳೆದ 70 ವರ್ಷಗಳಲ್ಲಿ ಭಾರತದಲ್ಲಿ ಮಣ್ಣಿನ ಸಾವಯವ ಇಂಗಾಲ(ಎಸ್‌ಓಸಿ)ದ ಪ್ರಮಾಣವು ಶೇ.1ರಿಂದ ಶೇ.0.3ಕ್ಕೆ ಇಳಿದಿದ್ದು, ಇದು ಕೃಷಿವಲಯಕ್ಕೆ ಕಳವಳಕಾರಿ ಸಂಗತಿಯಾಗಿದೆ ಎಂದು ರಾಷ್ಟ್ರೀಯ ಮಳೆನೀರಾವರಿ ಪ್ರದೇಶ ಪ್ರಾಧಿಕಾರ (ಎನ್‌ಆರ್‌ಎಎ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ದಲ್ವಾಲ್ ಅವರು ತಿಳಿಸಿದ್ದಾರೆ.

                ಸಾವಯವ ಇಂಗಾಲವು ಸಾವಯವ ಮಣ್ಣಿನ ಅತ್ಯಂತ ಮುಖ್ಯ ಸಂಯೋಜನೆಯಾಗಿದೆ ಮತ್ತು ಮಣ್ಣಿಗೆ ನೀರನ್ನು ಹಿಡಿದಿರಿಸಿಕೊಳ್ಳುವ ಸಾಮರ್ಥ್ಯ ಹಾಗೂ ಸ್ವರೂಪ ಹಾಗೂ ಫಲವತ್ತತೆಯನ್ನು ನೀಡುತ್ತದೆ ಎಂದವರು ತಿಳಿಸಿದ್ದಾರೆ.

           ಮಹಾರಾಷ್ಟ್ರದ ನಾಗಪುರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಮಣ್ಣಿನ ಓಎಸ್‌ಸಿ ಅಂಶದಲ್ಲಿ ವ್ಯಾಪಕ ಕುಸಿತಕ್ಕೆ ಕಾರಣವಾಗುತ್ತದೆ ಮತ್ತು ಗಿಡಗಳಿಗೆ ಪೌಷ್ಟಿಕಾಂಶಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುವ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳ ನಾಶವಾಗುತ್ತವೆ ಎಂದು ಅವರು ಹೇಳಿದರು.

            ಜೈವಿಕ ರಸಗೊಬ್ಬರಗಳು ಹಾಗೂ ಸಾವಯವಗೊಬ್ಬರವು ಮಣ್ಣಿನಲ್ಲಿರುವ ಎಸ್‌ಓಸಿ ಅಂಶಗಳನ್ನು ಹೆಚ್ಚಿಸುತ್ತದೆ ಎಂದವರು ತಿಳಿಸಿದರು.

             ಕಳೆದ 70 ವರ್ಷಗಳಲ್ಲಿ ಬೃಹತ್,ಕಿರು ಹಾಗೂ ಸೂಕ್ಷ್ಮ ನೀರಾವರಿ ಯೋಜನೆಗಳ ಯೋಜನೆಗಳ ಮೂಲಕ ಶೇ.51ರಷ್ಟು ಜಮೀನಿಗೆ ನೀರಾವರಿ ವ್ಯವಸ್ಥೆಯನ್ನು ಒದಗಿಸಲಾಗಿದೆ. ಆದರೆ ಶೇ. 51ರಷ್ಟು ಜಮೀನು ಈಗಲೂ ಮಳೆನೀರಿನ ಮೂಲಕ ಕೃಷಿ ಮಾಡಲಾಗುತ್ತಿದೆ.

           ಇಂತಹ ಪ್ರದೇಶಗಳಲ್ಲಿ ಸರಕಾರವು ತಂತ್ರಜ್ಞಾನದಿಂದ ಸುಧಾರಿತವಾದ ಸೂಕ್ಷ್ಮ ನೀರಾವರಿ ಯೋಜನೆಗಳನ್ನು ಪರಿಚಯಿಸುತ್ತಿದ್ದು ಇದರಿಂದ ಶೇ.30ರಿಂದ ಶೇ.40ರಷ್ಟು ನೀರಿನ ಉಳಿತಾಯವಾಗಲಿದೆ ಎಂದು ದಳವಾಯಿ ತಿಳಿಸಿದ್ದಾರೆ. ನೀರಾವರಿ ಜಮೀನಿನಲ್ಲಿ ಸರಾಸರಿ ಬೆಳೆ ಉತ್ಪಾದನೆಯು ಪ್ರತಿ ಏಕರೆಗೆ 3 ಟನ್ ಆಗಿದ್ದರೆ, ಮಳೆ ನೀರಾವರಿ ಪ್ರದೇಶಗಳಲ್ಲಿ ಪ್ರತಿ ಏಕರೆಗೆ 1.1 ಟನ್ ಆಗಲಿದೆ.

           ಕೇಂದ್ರ ಸರಕಾರವು ಆರಂಭಿಸಿರುವ ಪಲ್ಸಸ್ (ಬೇಳೆಕಾಳು) ಮಿಶನ್ ಬಗ್ಗೆ ಮಾತನಾಡಿದ ಅವರು 2016-17ನೇ ಸಾಲಿನಲ್ಲಿ ಧವಸಧಾನ್ಯಗಳ ಉತ್ಪಾದನೆಯು 16.7 ದಶಲಕ್ಷ ಟನ್‌ಗಳಿದ್ದುದು 2021-22ನೇ ಸಾಲಿನಲ್ಲಿ 25 ದಶಲಕ್ಷ ಟನ್‌ಗಳಿಗೇರಿದೆ. ಅದೇ ರೀತಿ ತೈಲ ಬೀಜಗಳ ಉತ್ಪಾದನೆಯು 2016-17ರಲ್ಲಿ 24 ದಶಲಕ್ಷ ಟನ್‌ಗಳಿದ್ದುದು ಈ ವರ್ಷ 32 ದಶಲಕ್ಷ ಟನ್‌ಗಳಿಗೇರಿದೆ ಎಂದು ದಳವಾಯಿ ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries