ನವದೆಹಲಿ: ರಷ್ಯಾ ಉಕ್ರೇನ್ ದಾಳಿ 11ನೇ ದಿನಕ್ಕೆ ಕಾಲಿಡುತ್ತಿರುವಂತೆಯೇ ಭಾರತ ಸರ್ಕಾರ ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ಭಾರತೀಯರ ಸ್ಥಳಾಂತರ ಕಾರ್ಯಾಚರಣೆಯ ಅಂತಿಮ ಹಂತವನ್ನು ಘೋಷಿಸಿದೆ. ಇದು ಆಪರೇಷನ್ ಗಂಗಾದ ಕೊನೆಯ ಹಂತ ಎನ್ನಲಾಗುತ್ತಿದೆ.
ಶನಿವಾರದ ವೇಳೆಗೆ 63 ಬಾರಿ ವಿಮಾನ ಹಾರಾಟ ನಡೆಸಿ ಒಟ್ಟು 13,330 ಭಾರತೀಯರನ್ನು ಯುದ್ಧಗ್ರಸ್ಥ ಉಕ್ರೇನಿನಿಂದ ಸ್ಥಳಾಂತರ ಮಾಡಲಾಗಿದೆ ಎನ್ನುವ ಮಾಹಿತಿ ಹೊರಬಂದಿದೆ.
ಭಾನುವಾರ 13 ವಿಮಾನಗಳಲ್ಲಿ ಉಕ್ರೇನಿನಿಂದ ಭಾರತೀಯರನ್ನು ಕರೆತರುವ ಬಗ್ಗೆ ಘೋಷಿಸಲಾಗಿತ್ತು. ಆ ಯೋಜನೆ ಕಾರ್ಯಪ್ರವೃತ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದ ಎದುರು ಸದ್ಯ ಇರುವ ಮುಖ್ಯವಾದ ಸವಾಲೆಂದರೆ ಉಕ್ರೇನಿನ ಸುಮಿ ನಗರದಲ್ಲಿ ಸಿಲುಕಿಕೊಂಡಿರುವ 700 ಭಾರತೀಯರ ರಕ್ಷಣೆ.