ಕೀವ್: ಯುದ್ಧಪೀಡಿತ ಉಕ್ರೇನ್ ನಲ್ಲಿ ಅತಿ ದೊಡ್ಡ ಸಂಖ್ಯೆಯಲ್ಲಿ ಭಾರತೀಯರು ಸಿಲುಕಿಕೊಂಡಿದ್ದ ನಗರ ಸುಮಿ. ಅಲ್ಲಿ ಸುಮಾರು 700 ಮಂದಿ ಭಾರತೀಯರು ಅಪಾಯಕ್ಕೆ ಸಿಲುಕಿದ್ದರು.
ಆಪರೇಷನ್ ಗಂಗಾ ಸ್ಥಳಾಂತರ ಕಾರ್ಯಾಚರಣೆಯಡಿ 700 ಮಂದಿಯನ್ನು ಸುಮಿ ನಗರದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಅವರೆಲ್ಲರೂ ಗುರುವಾರ ತಾಯ್ನಾಡು ಭಾರತಕ್ಕೆ ಮರಳಲಿದ್ದಾರೆ.
ಸುಮಿ ನಗರದಿಂದ 888 ಕಿ.ಮೀ ದೂರದಲ್ಲಿರುವ ಪೊಲ್ಟಾವ ಮತ್ತು ಎಲ್ ವಿವ್ ನಗರಗಳಲ್ಲಿ 700 ಮಂದಿ ಭಾರತೀಯರನ್ನು ಸದ್ಯ ಇರಿಸಲಾಗಿದೆ.