ಕಾಸರಗೋಡು: ಕೇರಳ ರಾಜ್ಯ ಬಜೆಟ್‍ನಲ್ಲಿ ಕಾಸರಗೋಡು ಜಿಲ್ಲೆಯ ಅಭಿವೃದ್ಧಿಗಾಗಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮೂಲಕ 75ಕೋಟಿ ರೂ. ಮೀಸಲಿರಿಸಲಾಗಿದೆ. ಕೆ.ಎನ್ ಬಾಲಗೋಪಾಲನ್ ರಾಜ್ಯ ಬಜೆಟನ್ನು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದರು.
ರಾಜ್ಯದ ಪ್ರತಿಷ್ಟಿತ ಯೋಜನೆಯೆಂದೇ ಪರಿಗಣಿಸಲಾಗಿರುವ ಕಾಸರಗೋಡಿನಿಂದ ತಿರುವನಂತಪುರ ವರೆಗಿನ ಸಿಲ್ವರ್ ಲೈನ್ ರೈಲ್ವೆ ಯೋಜನೆಗೆ 2ಸಾವಿರ ಕೋಟಿ ರೂ. ಮೀಸಲಿರಿಸಲಾಗಿದೆ. ಜತೆಗೆ ರಾಜ್ಯದಲ್ಲಿ ಬೆಲೆಯೇರಿಕೆ ತಡೆಗಟಟಲು ಹಾಗೂ ಜನತೆಗೆ ನ್ಯಾಯಯುತ ಬೆಲೆಯಲ್ಲಿ ಅಗತ್ಯ ಸಾಮಗ್ರಿ ಲಭ್ಯವಾಗಿಸುವಂತೆ ಮಾಡಲು 2ಸಾವಿರ ಕೋಟಿ, ವಿಶ್ವ ವಿದ್ಯಾಲಯಗಳ ಅಭಿವೃದ್ಧಿಗೆ 200ಕೋಟಿ ರೂ. ಕಿಫ್‍ಬಿ ಮೂಲಕ ಒದಗಿಸಲಾಗುವುದು.ರಬ್ಬರ್ ಕೃಷಿಕರಿಗೆ ಸಬ್ಸಿಡಿ ನೀಡಲು 500ಕೋಟಿ ರೂ, ರಸ್ತೆ-ಸೇತುವೆಗಳ ನಿರ್ಮಾಣಕ್ಕೆ 12ಒ7ಕೋಟಿ ರೂ, ಕರಾವಳಿ ಸಂರಕ್ಷಣೆಗೆ 100ಕೋಟಿ, ವನ್ಯ ಜೀವಿ ಇಲಾಖೆಗೆ 232ಕೋಟಿ ಮೀಸಲಿರಿಸಲಾಗಿದ್ದು, 200ಕೋಟಿ ರೂ.ಗಳ ಹೆಚ್ಚುವರಿ ಆದಾಯದ ಗುರಿಯಿರಿಸಲಾಗಿದೆ.ಜತೆಗೆ ಭೂಮಿಯ ನ್ಯಾಯ ಬೆಲೆ ಹೆಚ್ಚಳಕ್ಕೆ ಹಾಗೂ ಭೂಪರಿಷ್ಕರಣಾ ಕಾನೂನಿಗೆ ತಿದ್ದುಪಡಿ ತರಲೂ ತೀರ್ಮಾನಿಸಲಾಗಿದೆ.