ಕೊಲಂಬೋ: ರಾವಣ ರಾಜ್ಯ ಶ್ರೀಲಂಕಾದಲ್ಲಿ ಒಂದೇ ದಿನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ದಾಖಲೆ ಏರಿಕೆ ಕಂಡಿದೆ. ಪೆಟ್ರೋಲ್ 77 ರೂಪಾಯಿ ಏರಿಯಾದರೆ, ಡೀಸೆಲ್ 55 ರೂಪಾಯಿ ಹೆಚ್ಚಾಗಿದೆ.
ಕೊಲಂಬೋ: ರಾವಣ ರಾಜ್ಯ ಶ್ರೀಲಂಕಾದಲ್ಲಿ ಒಂದೇ ದಿನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ದಾಖಲೆ ಏರಿಕೆ ಕಂಡಿದೆ. ಪೆಟ್ರೋಲ್ 77 ರೂಪಾಯಿ ಏರಿಯಾದರೆ, ಡೀಸೆಲ್ 55 ರೂಪಾಯಿ ಹೆಚ್ಚಾಗಿದೆ.
ಲಂಕಾ ಸರ್ಕಾರಿ ಒಡೆತನದ ಇಂಧನ ಮತ್ತು ಗ್ಯಾಸ್ ಘಟಕ ಸಿಲೋನ್ ಪೆಟ್ರೋಲಿಯಂ ಬೆಲೆಯನ್ನು ಏರಿಸಿದೆ.
ಐಒಸಿ ಬೆಲೆ ಏರಿಕೆ ಮಾಡಿದ ನಂತರ ಶ್ರೀಲಂಕಾದಲ್ಲಿ ತೈಲ ಬೆಲೆ ಹೆಚ್ಚುತ್ತಿದೆ. ಶ್ರೀಲಂಕಾದ ದರಗಳ ಪ್ರಕಾರ, ಐಒಸಿ ಪೆಟ್ರೋಲ್ ಬೆಲೆಯಲ್ಲಿ 75 ಮತ್ತು ಡೀಸೆಲ್ ಬೆಲೆಯಲ್ಲಿ 50 ರೂಪಾಯಿಯಷ್ಟು ಹೆಚ್ಚಿಸಿದೆ. ಇದರ ಬೆನ್ನಲ್ಲೇ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ ಕೂಡ ಪೆಟ್ರೋಲ್ ಬೆಲೆಯಲ್ಲಿ 43.5 ಮತ್ತು ಡೀಸೆಲ್ ಬೆಲೆಯಲ್ಲಿ ಶೇಕಡಾ 45.5 ರಷ್ಟು ಹೆಚ್ಚಿಸಿದೆ.
ಲಂಕಾ ರೂಪಾಯಿ ಪ್ರಕಾರ ಭಾನುವಾರ ಒಂದು ಲೀಟರ್ ಪೆಟ್ರೋಲ್ಗೆ 254 ಮತ್ತು ಡೀಸೆಲ್ಗೆ 176 ರೂಪಾಯಿ ವೆಚ್ಚವಾಗುತ್ತಿದೆ. ಇನ್ನು ಇದೇ ಸಂದರ್ಭದಲ್ಲಿ ಭಾರತದಲ್ಲೂ ಪೆಟ್ರೋಲ್ ಬೆಲೆಯಲ್ಲಿ 25 ರೂ.ವರೆಗೆ ಏರಿಕೆಯಾಗಬಹುದು ಎಂದು ಹೇಳಲಾಗಿದೆ. ರಷ್ಯಾದ ತೈಲ ಸರಬರಾಜಿನ ಮೇಲೆ ಯುರೋಪಿಯನ್ ರಾಷ್ಟ್ರಗಳು ನಿರ್ಬಂಧಗಳನ್ನು ಹೇರಲಿವೆ ಎಂಬ ವರದಿಗಳ ನಂತರ ಕಚ್ಚಾ ತೈಲ ಬೆಲೆಗಳು ಗಗನಕ್ಕೇರಿವೆ. ದೇಶದಲ್ಲಿ 100 ದಿನಗಳಿಗೂ ಹೆಚ್ಚು ಕಾಲ ಯಥಾಸ್ಥಿತಿಯಲ್ಲಿದ್ದ ಪೆಟ್ರೋಲ್, ಡೀಸೆಲ್ ಬೆಲೆಯೂ ಇದೀಗ ಏರಿಕೆಯಾಗಲಿದೆ ಎಂದು ವರದಿಯಾಗಿದೆ.
ನವೆಂಬರ್ 4, 2021 ರಂದು ದೇಶದಲ್ಲಿ ಕೊನೆಯದಾಗಿ ಇಂಧನ ಬೆಲೆ ಏರಿಕೆ ವರದಿಯಾಗಿದೆ.