ನವದೆಹಲಿ: 'ದೇಶದಲ್ಲಿ ನಕ್ಸಲ್ ಹಿಂಸಾಚಾರದ ಪ್ರಮಾಣವು ಶೇ 77ರಷ್ಟು ಇಳಿಕೆಯಾಗಿದೆ' ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಮಂಗಳವಾರ ಲೋಕಸಭೆಗೆ ತಿಳಿಸಿದರು.
ನವದೆಹಲಿ: 'ದೇಶದಲ್ಲಿ ನಕ್ಸಲ್ ಹಿಂಸಾಚಾರದ ಪ್ರಮಾಣವು ಶೇ 77ರಷ್ಟು ಇಳಿಕೆಯಾಗಿದೆ' ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಮಂಗಳವಾರ ಲೋಕಸಭೆಗೆ ತಿಳಿಸಿದರು.
'2009ರಲ್ಲಿ ಗರಿಷ್ಠ ಪ್ರಮಾಣದಲ್ಲಿ ಅಂದರೆ 2,258 ನಕ್ಸಲ್ ಹಿಂಸಾಚಾರ ಘಟನೆಗಳು ನಡೆದಿದ್ದರೆ, 2021ರಲ್ಲಿ ಈ ಘಟನೆಗಳ ಪ್ರಮಾಣ 509ಕ್ಕೆ ಇಳಿಕೆಯಾಗಿದೆ.
'ನಕ್ಸಲ್ ಹಿಂಸಾಚಾರದ ಪರಿಣಾಮ ಸಾವಿಗೀಡಾಗುತ್ತಿದ್ದವರ ಪ್ರಮಾಣವು ಶೇ 85ರಷ್ಟು ಇಳಿಕೆಯಾಗಿದೆ. 2010ರಲ್ಲಿ 1,005 ಮಂದಿ ಹಾಗೂ 2021ರಲ್ಲಿ 147 ಮಂದಿ ಸಾವಿಗೀಡಾಗಿದ್ದಾರೆ. ಇವರಲ್ಲಿ ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ಸೇರಿದ್ದಾರೆ' ಎಂದು ಅವರು ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.